ಕುಮಟಾ: ತಾಲೂಕಿನ ಹಣ್ಣೇಮಠದ ನಿವಾಸಿಯಾದ ಶ್ರೀ ಗಣಪತಿ ಮಾಸ್ತಿ ಪಟಗಾರ, ಇವರು ಬೈಕ್ ಅಪಘಾತದಿಂದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಹಣ್ಣೇಮಠದವರ ಮನೆಗೆ ಭೇಟಿ ನೀಡಿ ಸಾಂತ್ವನದ ಜೊತೆಗೆ 7500 ರೂ.ವನ್ನು ನೀಡಿ, ಶ್ರೀ ಗಣಪತಿಯವರು ಬೇಗ ಗುಣಮುಖರಾಗಲಿ ಎಂದು ಬಳಗದವರು ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಹಣ್ಣೇಮಠದ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು, ಗಣಪತಿ ಕುಟುಂಬವರ್ಗದವರು ಈ ಮೂಲಕ ಪರಿಹಾರ ನಿಧಿಯನ್ನು ನೀಡಿದ ಯುವ ಬಳಗದವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.