• Slide
    Slide
    Slide
    previous arrow
    next arrow
  • ಧರ್ಮಸ್ಥಳದ ಹೆಸರಿನಲ್ಲಿ ದತ್ತಿ ಸ್ಥಾಪನೆಗೆ ‌ಹೆಗ್ಗಡೆ ಸ್ಪಂದನೆ

    300x250 AD

    ಧರ್ಮಸ್ಥಳ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಹಿರಿಯರ, ಸಂಘ ಸಂಸ್ಥೆಗಳ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಅದರ ಬಡ್ಡಿ ಹಣದಿಂದ ಪ್ರಶಸ್ತಿ ನೀಡಲು ಯೋಜಿಸಿದ್ದು, ಇದಕ್ಕೆ ಧರ್ಮಸ್ಥಳದ‌ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸ್ಪಂದಿಸಿದರು.


    ಭಾನುವಾರ ಯಕ್ಷಗಾನ ಅಕಾಡೆಮಿಯ‌ ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರನ್ನು ಶ್ರೀಕ್ಷೇತ್ರದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಅಕಾಡಮಿಯು ಅಕಾಡೆಮಿಕ್ ಕಾರ್ಯದ ಜೊತೆಗೆ ಸಾಧ್ಯ ಇರುವಷ್ಟೂ ಸಮಾಜಮುಖಿ ಮಾಡಬೇಕು. ಪ್ರಸ್ತಾಪಿಸಿದ ಯಕ್ಷಗಾನ ರಾಜ್ಯ‌ಮಟ್ಟದ ಸಮ್ಮೇಳನ ಹಾಗೂ ವಿಶ್ವಕೋಶ ಆಗಲೇಬೇಕಾದ ಕಾರ್ಯವಾಗಿದೆ. ಇದಕ್ಕೆ ಸರಕಾರಗಳೂ ಸ್ಪಂದಿಸಬೇಕು. ತಾವೂ ಸರಕಾರಕ್ಕೆ ಈ ಬಗ್ಗೆ ಒತ್ತಡ ಹಾಕುವದಾಗಿ ಹೇಳಿದರು.


    ಧರ್ಮಸ್ಥಳದ‌ ಹೆಗ್ಗಡೆ ಅವರ ಹಿರಿಯರ ಹೆಸರಿನಲ್ಲಿ ನಿಧಿ ಸ್ಥಾಪಿಸಿ ಅದರ ಬಡ್ಡಿ ಹಣದಿಂದ ಪ್ರಶಸ್ತಿ ನೀಡುವ ಇಂಗಿತವನ್ನು ಅಧ್ಯಕ್ಷ ಹೆಗಡೆ ವ್ಯಕ್ತಪಡಿಸಿದಾಗ‌ ತಕ್ಷಣ ಸಕಾರಾತ್ಮಕವಾಗಿ‌ ಸ್ಪಂದಿಸಿ ಅಕಾಡೆಮಿಯ ಕಾರ್ಯದ ಜೊತೆ ಸದಾ ಇರುವದಾಗಿ‌ ಹೇಳಿದರು.

    300x250 AD


    ಯಕ್ಷಗಾನದ ಮ್ಯೂಸಿಯಂ ಕೂಡ ಬೇಕು. ನಮಗೆ ಅದು ಹೊಸತಲ್ಲದೇ ಇರಬಹುದು. ಆದರೆ, ಹೊಸಬರಿಗೆ ಅಗತ್ಯವಾದ ಮಾಹಿತಿಗೆ ಬೇಕಾಗಿದೆ. ಇಂಥ ಒಳಿತಿನ ಕಾರ್ಯಕ್ಕೆ ನಮ್ಮಿಂದ ಏನಾಗಬೇಕು ತಿಳಿಸಬೇಕು ಎಂದೂ ಹೇಳಿದರು.


    ಈ ವೇಳೆ ಅಕಾಡೆಮಿಯ ರಜಿಸ್ಟ್ರಾರ ಎಚ್.ಜಿ.ಶಿವರುದ್ರಪ್ಪ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top