• Slide
  Slide
  Slide
  previous arrow
  next arrow
 • ಕುಮಟಾ ಪೊಲೀಸರ ಕಾರ್ಯಾಚರಣೆ; ಮೋಟಾರ್ ಬೈಕ್ ಕದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

  300x250 AD

  ಕುಮಟಾ: ಕುಮಟಾ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿಟ್ಟಿದ್ದ ಮೋಟಾರ ಸೈಕಲ್ ಕಳ್ಳತನವಾಗಿದ್ದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಬೆನ್ನತ್ತಿದ್ದ ಪೊಲೀಸರು ಒಂದೇ ದಿನದಲ್ಲಿ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.


  ತಾಲೂಕಿನ ಬೆಟ್ಕುಳಿಯ ಮಹೇಶ ಗಾವಡಿ ಎಂಬಾತ ಜ.18 ರಂದು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಮೋಟಾರ್ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಒಂದೇ ದಿನದಲ್ಲಿ ಕಳ್ಳರನ್ನು ಪತ್ತೆ ಮಾಡಿದ್ದಾರೆ. ಮಂಗಳೂರು ಸೂರತ್ಕಲ್’ನ ಮೊಹಮ್ಮದ ಮೊಹಮ್ಮದ ಗೌಸ್(22), ಮೊಹಮ್ಮದ ಶರೀಫ್(20) ಬೈಕ್ ಕದ್ದ ಆರೋಪಿಗಳು. ಜೊತೆಯಲ್ಲಿ ಬೈಕ್ ಸ್ವೀಕರಿಸಿದ ಆರೋಪಿತರಾದ ಶಿರಸಿ ಬಸವೇಶ್ವರನಗರದ ಆಸಿಫ್ ಅಬ್ದುಲ್ ಶೇಖ್(22) ಹಾಗೂ ಅನ್ವರ ಭಾಷಾ ಶೇಖ್ (20) ಇವರನ್ನು ಕೂಡ ಬಂಧನ ಮಾಡಲಾಗಿದೆ.

  300x250 AD


  ಕಾರ್ಯಾಚರಣೆಯಲ್ಲಿ ಎಸ್ಪಿ ಡಾ. ಸುಮನ್ ಪೆನ್ನೇಕರ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಬದ್ರಿನಾಥ ಎಸ್, ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು, ಪ್ರಭಾರ ಪೊಲೀಸ್ ನಿರೀಕ್ಷಕರು ಶ್ರೀಧರ ಎಸ್.ಆರ್ ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ಠಾಣೆಯ ನವೀನ್ ನಾಯ್ಕ ಪಿ.ಎಸ್.ಐ ಕಾ&ಸು ಇವರ ನೇತೃತ್ವದಲ್ಲಿ ಪಿ.ಎಸ್.ಐ ರವಿ ಗುಡ್ಡಿ, ಹಾಗೂ ಪದ್ಮಾ ದೇವಳಿ, ಚಂದ್ರಮತಿ ಪಟಗಾರ ಹಾಗೂ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಸಂತೋಷ ಬಾಳೇರ, ಬಸವರಾಜ ಜಾಡರ್, ಕೃಷ್ಣಾ ಎನ್. ಜಿ. ಇವರುಗಳು ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top