ಕುಮಟಾ : ರೋಟರಿ ಕ್ಲಬ್ ಕುಮಟಾ ವತಿಯಿಂದ ಕುಮಟಾ ಸರ್ಕಾರಿ ಆಸ್ಪತ್ರೆಗೆ ಒಂದು ಕೋಟಿ ರೂಪಾಯಿ ಮೌಲ್ಯದ ಸಲಕರಣೆ ಹಾಗೂ ಅಂಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು.
ಆಸ್ಪತ್ರೆಯ ಆವರಣದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ಪಿ ಆರ್ ನಾಯಕ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೆಜಿಂಗ್ ಟ್ರಸ್ಟಿ ಪ್ರಕಾಶ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.
ನಿಕಟಪೂರ್ವ ರೋಟರಿ ಕಾರ್ಯದರ್ಶಿ ಅತುಲ್ ಕಾಮತ್ ಮಾತನಾಡಿ ಉತ್ತರ ಕಾಣದ ಜಿಲ್ಲೆ ಉತ್ತರ ಕನ್ನಡ ಎಂಬ ಮಾತಿದೆ ಅದರಂತೆ ಹೆಚ್ಚಿನ ಸವಲತ್ತು ಕಾಣದ ಜಿಲ್ಲೆ ಎಂಬುದು ತುಂಬಾ ಬೇಸರದ ಸಂಗತಿ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅನ್ನೊದು ಸಾರ್ವಜನಿಕ ಕೂಗಿದೆ ಅದರ ಶಾಸಕರು ಕೂಡ ತುಂಬಾ ಪ್ರಯತ್ನ ಮಾಡಿದರು ಆದರೆ ಕೈಗೂಡಲಿಲ್ಲ. ಆದರೂ ತುಂಬಾ ಶ್ರಮ ವಹಿಸಿ ಸರ್ಕಾರಿ ಆಸ್ಪತ್ರೆಗೆ ಬಹಳಷ್ಟು ವ್ಯವಸ್ಥೆ ಮಾಡಿಸಿದ್ದಾರೆ.
ನಮ್ಮ ರೋಟರಿ ಗ್ಲೊಬಲ್ ಗ್ರ್ಯಾಂಟ್ ಮಖಾಂತರ ಕುಮಟಾ ಸರ್ಕಾರಿ ಆಸ್ಪತ್ರೆ ಯನ್ನು ಮೇಲ್ದರ್ಜೆಗೆ ಏರಿಸಲು ಕುಮಟಾ ರೋಟರಿ ಹಿಂದಿನ ನಮ್ಮ ಅವಧಿಯಲ್ಲಿ ಪ್ರಯತ್ನ ಮಾಡುವುದಕ್ಕೆ ಮುಂದಾಯಿತು ಅದರ ಬಗ್ಗೆ ಶರತ್ ಪೈ ರವರ ಸಲಹೆಯಂತೆ ನಡೆದು ಯಶಸ್ಸು ಕಾಣುವುದಕ್ಕೆ ಕಾರಣೀಕರ್ತರು ನಮ್ಮ ಕುಮಟಾದ ಪುತ್ರ ಪ್ರಕಾಶ ನಾಯಕರವರು. ಅವರು ಮೂವತ್ತು ಲಕ್ಷ ನೀಡಿದರು.
ಇನ್ನೊಬ್ಬ ರೋಟರಿ ಜಿಲ್ಲಾ ನಿಕಟಪೂರ್ವ ಜಿಲ್ಲಾ ಗವರ್ನರ್ ಆಗಿದ್ದಂತಹ ಕೊಲ್ಹಾಪುರದ ಸಂಗ್ರಾಮ ಪಾಟೀಲ್ ರವರು ರೋಟರಿ ಸಂಸ್ಥೆಯಿಂದ ಮೂವತ್ತು ಲಕ್ಷ ನೀಡಿದ್ದರು. ಶಾಸಕ ದಿನಕರ ಶೆಟ್ಟಿ ಯವರು ಕೂಡ ನಮ್ಮ ಜೊತೆ ನಿಂತು ತುಂಬಾ ಸಹಕಾರ ನೀಡಿದ್ದಾರೆ. ಇನ್ನೂ ಅನೇಕ ದಾನಿಗಳು ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲರ ಸಹಕಾರದಿಂದ ಇಂದು ಇಷ್ಟು ಸಲಕರಣೆಗಳು ಇಂದು ಹಸ್ತಾಂತರಗೊಳ್ಳುತ್ತಿದೆ. ಈ ಎಲ್ಲ ಉಪಕರಣವನ್ನು ಸರ್ಕಾರಿ ಆಸ್ಪತ್ರೆ ಯ ವೈದ್ಯರು ಸಿಬ್ಬಂದಿಗಳು ಸದುಪಯೋಗ ಮಾಡಿಕೊಂಡು ಸಮಾಜದ ಜನರಿಗೆ ಉತ್ತಮ ಪ್ರೀತಿ ಇಂದ ಉತ್ತಮ ಚಿಕಿತ್ಸೆ ನೀಡಿ ಜನರು ಆರೋಗ್ಯ ದಿಂದ ಇರುವಂತೆ ಮಾಡಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಮಮಿ ಪ್ರಕಾಶ ನಾಯಕ ಮಾತನಾಡಿ ನನ್ನನ್ನು ಕುಮಟಾ ರೋಟಿರಿಯವರು ಕಳೆದ ವರ್ಷ ಸಂಪರ್ಕಿಸಿ ಈ ಕೊಡುಗೆ ಯ ಬಗ್ಗೆ ತಿಳಿಸಿ ಸಹಕಾರ ನೀಡುವಂತೆ ಕೋರಿದಾಗ ನಾನು ಮೂವತ್ತು ಲಕ್ಷ ನೀಡುವುದಾಗಿ ತಿಳಿಸಿದ್ದೆ ಆಮೇಲೆ ಎರಡು ವರ್ಷ ಈ ಕೋವಿಡ್ ಕಾರಣದಿಂದ ರೋಟರಿ ಯವರ ಈ ಸಲಕರಣೆ ಹಸ್ತಾಂತರ ತಡವಾಗಿದೆ ಆದರೂ ತುಂಬಾ ಖುಷಿ ಅನಸಿದೆ. ನಮ್ಮ ಈ ಕುಮಟಾ ಆಸ್ಪತ್ರೆಮಯ ಒಳಗಡೆ ನಾನು ಇಂದು ಹೋದಾಗ ಯಾವುದೋ ದೊಡ್ಡ ಖಾಸಗಿ ಆಸ್ಪತ್ರೆಯ ಒಳಗಡೆ ಹೋದಂತೆ ಅನಸಿತ್ತು ತುಂಬಾ ಸ್ವಚ್ಛತೆ ಹಾಗೂ ಉತ್ತಮ ವ್ಯವಸ್ಥೆ ಒಳಗೊಂಡಿದೆ ಇದೊಂದು ಸುಸಜ್ಜಿತ ಆಸ್ಪತ್ರೆ ಎಂದು ಸಂತಸ ವ್ಯಕ್ತಪಡಿಸಿದರು.ಈ ರೀತಿಯ ಸುಸಜ್ಜಿತ ಆಸ್ಪತ್ರೆ ಇದ್ದರೆ ಎಲ್ಲರೂ ಸರ್ಕಾರಿ ಆಸ್ಪತ್ರೆ ಯ ಸೇವೆಯನ್ನೇ ಪಡೆದುಕೊಳ್ಳಬಹುದು ಹೊರದೇಶದಲ್ಲಿ ಸರ್ಕಾರಿ ಆಸ್ಪತ್ರೆ ಯಲ್ಲೇ ಹೆಚ್ಚಾಗಿ ಎಲ್ಲರೂ ಸೇವೆ ತೆಗೆದುಕೊಳ್ಳುತ್ತಾರೆ. ಕುಮಟಾ ಆಸ್ಪತ್ರೆಯಲ್ಲಿ ಶ್ರೀನಿವಾಸ ಡಾಕ್ಟರ್ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಅವರು ತುಂಬಾ ಕಳಕಳಿ ಇರುವಂಥ ವೈದ್ಯರು. ಇಂತಹ ವೈದ್ಯರು ನನಗೆ ಸಿಕ್ಕಿದರೆ ಹಾಗೂ ಕುಮಟಾ ಜನತೆ ಜಾಗ ನೀಡಿದರೆ ನಾನೇ ಆಸ್ಪತ್ರೆ ನಿರ್ಮಿಸಲು ಸಿದ್ಧ ಎಂದರು.
ಇನ್ನೊರ್ವ ಮುಖ್ಯ ಅತಿಥಿ ನಿಕಟಪೂರ್ವ ಜಿಲ್ಲಾ ಗವರ್ನರ್ ಸಂಗ್ರಾಮ ಪಾಟೀಲ್ ಮಾತನಾಡಿ ಹಿಂದಿನ ರೊಟರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಶಶಿಕಾಂತ ಕೊವಾಳೆಕರ್ ಹಾಗೂ ಕಾರ್ಯದರ್ಶಿ ಅತುಲ್ ಕಾಮತ್ ಹಾಗೂ ಇತರ ಸದಸ್ಯರು ತುಂಬಾ ಉತ್ತಮ ಸಮಾಜಮುಖಿ ಕಾರ್ಯ ಮಾಡಿದ್ದಾರೆ ಅವರ ಈ ಜನೋಪಕಾರಿ ಕಾರ್ಯಕ್ಕೆ ನಾನೂ ಕೂಡ ನನ್ನ ಸಹಾಯ ನೀಡಿದ್ದೆ.. ಇದೊಂದು ತುಂಬಾ ಉತ್ತಮ ಕಾರ್ಯ ಜನರಿಗೆ ಇದು ತುಂಬಾ ಉಪಕಾರಿ ಆಗಲಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸರ್ಕಾರಿ ಆಸ್ಪತ್ರೆ ಗೆ ಇಂದು ಒಂದು ಕೋಟಿಯ ಸಲಕರಣೆಗಳನ್ನು ರೋಟರಿ ಯವರು ನೀಡಿದ್ದಾರೆ ಇದಕ್ಕೆ ನೆರವಾದ ಉದ್ಯಮಿ ಪ್ರಕಾಶ ನಾಯಕ ರವರನ್ನು ಹಾಗೂ ಎಲ್ಲ ದಾನಿಗಳ ನ್ನು ಅಭಿನಂದಿಸುತ್ತೇನೆ. ಪ್ರಕಾಶ ನಾಯಕ ರವರು ಯಾವತ್ತೂ ಕೊಡುಗೈ ದಾನಿಗಳು ಮತ್ತು ಸಮಾಜದ ಪರವಾಗಿ ತುಂಬಾ ಕಳಕಳಿ ಹೊಂದಿದವರು. ನಮ್ಮ ಲಸಿಕೆ ಕಾರ್ಯಕ್ರಮದಲ್ಲಿ ನಾನು ಅವರಲ್ಲಿ ನಮ್ಮ ಲಸಿಕೆಗೆ ಸಹಾಯ ಸಹಕಾರ ನೀಡುವಂತೆ ವಿನಂತಿಸಿದ್ದೆ ತಕ್ಷಣ ಅವರು ಏಳು ಲಕ್ಷ ರೂಪಾಯಿ ನಮ್ಮ ಕ್ಷೇತ್ರದ ಜನತೆಗೆ ಲಸಿಕೆ ನೀಡಲು ವೈದ್ಯಾಧಿಕಾರಿಗಳ ಖಾತೆ ಹಣ ವರ್ಗಾಯಿಸಿ ಸಹಾಯ ಮಾಡಿದ್ದಾರೆ. ನಾನೂ ಕೂಡ ಈಗ ಮತ್ತೊಂದು ಪ್ರಯತ್ನ ಮಾಡಿದ್ದು ಬೆಂಗಳೂರಿನ ಬಿಇಎಲ್ ನವರು ಆಸ್ಪತ್ರೆ ವಿಶೇಷ ಕಟ್ಟಡಕ್ಕೆ ಎರಡು ಕೋಟಿ ರೂಪಾಯಿ ಕೊಡಲು ಒಪ್ಪಿದ್ದಾರೆ ಹಾಗೂ ಏಳು ಹೊಸ ಐಸಿಯು ಬೆಡ್ ಕೂಡ ಬರಲಿದೆ ಎಂದರು.
ನಿಕಟಪೂರ್ವ ರೋಟರಿ ಅಧ್ಯಕ್ಷ ಶಶಿಕಾಂತ ಕೊವಾಳೆಕರ್ ಕಾರ್ಯಕ್ರಮ ದ ಬಗ್ಗೆ ಸಂತಸ ವ್ಯಕ್ತಪಡಿಸಿ ನಮ್ಮ ಅವಧಿಯಲ್ಲಿ ಕೈಗೊಂಡ ಕಾರ್ಯ ಇಂದು ನೆರವೇರಿದೆ ಮನಸ್ಸು ತುಂಬಿ ಬಂದಿದೆ. ಸಹಾಯ ನೀಡಿದ ಎಲ್ಲ ದಾನಿಗಳನ್ನು ಮನಃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಹಾಗೂ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದ ಅತುಲ್ ರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಗೌರೀಶ್ ಧೊಂಡ್ ರವರು ಇವತ್ತು ಇಷ್ಟು ಸಲಕರಣೆ ಹಸ್ತಾಂತರಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ಎಲ್ಲರ ಸಹಾಯ ಸಹಕಾರ ದೊಂದಿಗೆ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಲಾಗುವುದು ಎಂದರು.
ವೇದಿಕೆಯಲ್ಲಿ ರೊ ವಿನಾಯಕ ಹೆಗಡೆ, ಈ ಕಾರ್ಯದರ್ಶಿ ರೊ ಶಿಲ್ಪಾ ಧಿನರಾಜ್, ರೋ ನಾಗರಾಜ ಜೋಶಿ, ವೈದ್ಯಾಧಿಕಾರಿ ಗಣೇಶ ನಾಯ್ಕ ಉಪಸ್ಥಿತರಿದ್ದರು