• Slide
    Slide
    Slide
    previous arrow
    next arrow
  • ಗದ್ದೆಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು; ಬೆಳೆ ನಾಶ

    300x250 AD

    ಮುಂಡಗೋಡ: ತಾಲೂಕಿನ ಕಾತೂರ ವಲಯ ಅರಣ್ಯ ವ್ಯಾಪ್ತಿಯ ಮರಗಡಿ, ನಾಗನೂರ, ಹನಮಾಪುರ, ಶಿಂಗ್ನಳ್ಳಿ ಭಾಗದಲ್ಲಿ ರೈತರ ಗದ್ದೆಗಳಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿ ಭತ್ತದ ಬಣವೆಗಳು, ಗೋವಿನಜೋಳ, ಅಡಕೆ, ಹಾಗೂ ಬಾಳೆ ಬೆಳೆಗಳನ್ನು ನಾಶ ಪಡಿಸಿ ಬೆಳೆಗಳನ್ನು ತಿಂದು ತುಳಿದು ಹಾನಿ ಮಾಡುವ ಕೆಲಸ ಮುಂದುವರೆಸಿವೆ.

    ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಬಿಡುಬಿಟ್ಟಿರುವ ಕಾಡಾನೆಗಳು ದಿನಕ್ಕೊಂದು ಗ್ರಾಮಗಳ ಕಡೆಗಳಲ್ಲಿ ದಾಳಿ ನಡೆಸುತ್ತಾ ರೈತರ ಗದ್ದೆಗಳಲ್ಲಿನ ಬೆಳೆಗಳನ್ನು ಹಾನಿ ಮಾಡುತ್ತಿದ್ದು. ಒಂದು ವಾರದಿಂದ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಮರಗಡಿ, ,ಶಿಂಗ್ನಳ್ಳಿ, ನಾಗನೂರ, ಹನಮಾಪುರ ಅರಣ್ಯದ ಅಂಚಿನಲ್ಲಿನ ಭಾಗದಲ್ಲಿ ಸಂಚರಿಸುತ್ತಿದ್ದು ಆನೆಗಳ ಹಿಂಡು ಭತ್ತದ ಕಾಳಿನ ಬಣವೆ, ಹುಲ್ಲಿನ ಬಣವೆ, ಗೋವಿನ ಜೋಳದ ಬೆಳೆ, ಗೋವಿನ ಜೋಳದ ಸಪ್ಪಿಯ ಬಣವೆ, ಅಡಕೆ ತೋಟ ಸೇರಿದಂತೆ ಬಾಳೆ ತೋಟದಲ್ಲಿನ ಬೆಳೆಗಳನ್ನು ತಿಂದು ತುಳಿದು ನಾಶ ಪಡಿಸಿವೆ. ಶಿವಾನಂದ ಮೇಲಿನಮನಿ, ಹನ್ಮಂತಪ್ಪ ಯಲ್ಲಾಪುರ, ತಿಪ್ಪಣ್ಣ ಕೋಟಳ್ಳಿ, ಮಲ್ಲಿಕಾರ್ಜುನ ಪಾಟೀಲ, ರಾಮನಗೌಡ ಪಾಟೀಲ ಎಂಬ ರೈತರ ಗದ್ದೆಗಳಲ್ಲಿನ ಬೆಳೆಗಳನ್ನು ಹಾನಿ ಮಾಡಿವೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿವೆ. ಕಾತೂರ ವಲಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ.

    300x250 AD

    ಆರ್.ಎಪ್.ಓ ಅಜಯ ನಾಯ್ಕ: ಕಾಡಾನೆಗಳು ಹಾನಿ ಮಾಡಿದ ಗದ್ದೆಗಳಿಗೆ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಸರ್ಕಾರದಿಂದ ಬರುವ ರೈತರ ಬೆಳೆ ಕಾಡನೆಗಳ ಹಾನಿ ಮಾಡಿದ ಪರಿಹಾರಕ್ಕೆ ಅರ್ಜಿ ಆನ್ಲೈನ ಮೂಲಕ ಹಾಕಲಾಗಿದೆ. ಆನೆಗಳು ರೈತರ ಗದ್ದೆಗಳಿಗೆ ಹೋಗದಂತೆ ರಾತ್ರಿ ಸಿಬ್ಬಂದಿಗಳು ಗಸ್ತು ಹಾಕಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top