ಮುಂಡಗೋಡ: ಪಟ್ಟಣದ ಹೆಸ್ಕಾಂ ಕಚೇರಿಯ ಮುಂದಿರುವ ಸಿದ್ದರಾಮೇಶ್ವರ ಗದ್ದುಗೆಯ ಹತ್ತಿರ ತಾಲೂಕಾ ಭೋವಿ ಸಮಾಜದ ಮುಖಂಡರು ಸಭೆ ಸೇರಿ ನೂತನ ತಾಲೂಕಾ ಪದಾಧಿಕಾರಿಗಳ ಆಯ್ಕೆಯನ್ನು ಮಾಡಿದರು.
ಭೋವಿ ಸಮಾಜದ ತಾಲೂಕಾ ಅಧ್ಯಕ್ಷರಾಗಿ ಹನ್ಮಂತಪ್ಪ ಆರೆಗೊಪ್ಪ, ಉಪಾಧ್ಯಕ್ಷರಾಗಿ ಸುಭಾಸ ಭೋವಿ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಸ ವಡ್ಡರ, ಕಾರ್ಯದರ್ಶಿಯಾಗಿ ಪರಶುರಾಮ ಕರ್ಜಗಿ, ಗೌರವಾಧ್ಯಕ್ಷರಾಗಿ ಭೀಮಣ್ಣ ಭೋವಿ, ಹಾಗೂ ಖಜಾಂಚಿಯಾಗಿ ಹನುಮಂತಪ್ಪ ಕಾಮನಳ್ಳಿ ಆಯ್ಕೆಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಮಕೃಷ್ಣ ಮೂಲಿಮನಿ, ದುರ್ಗಪ್ಪ ಬಂಡಿವಡ್ಡರ, ಬಸವಂತಪ್ಪ ಕಟ್ಟಿಮನಿ, ಲಕ್ಷ್ಮಣ ಭೋವಿ ವಡ್ಡರ, ದಯಾನಂದ ಕಳಸಾಪುರ, ಬಸವರಾಜ ಕಳಸಾಪುರ, ಗೋವಿಂದ ವರೂರ, ಅಶೋಕ ಭೋವಿ, ಶಿವಕುಮಾರ ಭೋವಿ, ಲಕ್ಷ್ಮಣ ಹಿರೇಹಳ್ಳಿ ತಿಪ್ಪಣ್ಣ ಭೋವಿ, ವಾಸು ದಾವಣಗೇರಿ, ಹುಲಗಪ್ಪ ಭೋವಿವಡ್ಡರ, ನರಸಪ್ಪ ಕಳಲಕೊಂಡ, ಗಿಡ್ಡಪ್ಪ ಹಿರೇಹಳ್ಳಿ, ರಾಜು ಭೋವಿ, ಮುಂತಾದವರು ಉಪಸ್ಥಿತರಿದ್ದರು.