• Slide
    Slide
    Slide
    previous arrow
    next arrow
  • ಭಾರತೀಯ ರೈಲ್ವೇ ಹೊಸ ನಿಯಮ; ಜೋರಾಗಿ ಮಾತನಾಡುವುದು, ಸಂಗೀತ ಕೇಳುವುದು ನಿಷೇಧ

    300x250 AD

    ನವದೆಹಲಿ: ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಪ್ರಯಾಣಿಕರಿಗೆ ಹಿತವಾಗಿಸಲು, ಭಾರತೀಯ ರೈಲ್ವೇ ಹೊಸ ನಿಯಮಗಳನ್ನು ರಚಿಸಿದೆ. ಭಾರತೀಯ ರೈಲ್ವೆಯು ಜೋರಾಗಿ ಸಂಗೀತ ಹಾಕುವುದು ಮತ್ತು ಜೋರಾಗಿ ಫೋನ್‌ಗಳಲ್ಲಿ ಮಾತನಾಡುವುದನ್ನು ನಿಷೇಧಿಸುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಜೋರಾಗಿ ಮಾತನಾಡುವ ಅಥವಾ ಜೋರಾಗಿ ಸಂಗೀತ ಕೇಳಿ ಸಿಕ್ಕಿಬೀಳುವ ಪ್ರಯಾಣಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಹೇಳಿದೆ. ಜೊತೆಗೆ ಯಾವುದೇ ಪ್ರಯಾಣಿಕರಿಗೆ ತೊಂದರೆಯಾದರೆ ಅದಕ್ಕೆ ರೈಲಿನ ಸಿಬ್ಬಂದಿಯೇ ಹೊಣೆಯಾಗುತ್ತಾರೆ ಎಂದಿದೆ. ರೈಲ್ವೆ ಸಚಿವಾಲಯಕ್ಕೆ ಈ ಸಮಸ್ಯೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿರುವುದರಿಂದ ಈ ನಿಯಮಾವಳಿಗಳನ್ನು ಪರಿಚಯಿಸಲಾಗಿದೆ.

    300x250 AD

    ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಖಚಿತಪಡಿಸಿಕೊಳ್ಳಲು, ಆರ್‌ಪಿಎಫ್, ಟಿಕೆಟ್ ಚೆಕ್ಕರ್‌ಗಳು, ಕೋಚ್ ಅಟೆಂಡೆಂಟ್‌ಗಳು ಮತ್ತು ಕ್ಯಾಟರಿಂಗ್ ಸೇರಿದಂತೆ ರೈಲು ಸಿಬ್ಬಂದಿಯು ಪ್ರಯಾಣಿಕರನ್ನು ಯೋಗ್ಯ ಸಾರ್ವಜನಿಕ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಕೇಳುವ ಜವಾಬ್ದಾರಿಯನ್ನು ವಹಿಸಲಿದ್ದಾರೆ.

    ಗುಂಪುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತಡರಾತ್ರಿಯವರೆಗೆ ಮಾತನಾಡಲು ಅನುಮತಿಸಲಾಗುವುದಿಲ್ಲ ಮತ್ತು ದೀಪಗಳನ್ನು ಮಿತವಾಗಿ ಬಳಕೆ ಮಾಡುವಂತೆಯೂ ಎಂದು ಹೊಸ ನಿಯಮಗಳು ಹೇಳುತ್ತವೆ. ನಿಯಮಗಳನ್ನು ಪಾಲಿಸದ ಪ್ರಯಾಣಿಕರನ್ನು ರೈಲ್ವೆ ಕಾಯಿದೆ ನಿಬಂಧನೆಗಳ ಪ್ರಕಾರ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ರೈಲ್ವೆ ಹೇಳಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top