ಮುಂಡಗೋಡ: ಪಟ್ಟಣದ ಹಳೂರ ಓಣಿಯಲ್ಲಿಯ ಮಾನಸಿಕ ಅಸ್ವಸ್ಥನೊಬ್ಬನಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಶೌರ್ಯ ತಂಡದ ಯುವಕರು ಆತನಿಗೆ ಉಪಚಾರ ಮಾಡಿ ಮನೆಗೆ ಬಿಟ್ಟು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಟ್ಟಣದ ಹಳೂರ ಓಣಿಯ ಸುಮಾರು 56 ವರ್ಷದ ಲಕ್ಷ್ಮಣ ಭೋವಿ ಎಂಬಾತ ಅಸ್ವಸ್ಥನಾದ ವ್ಯಕ್ತಿಯಾಗಿದ್ದಾನೆ. ಈತನು ಕಳೆದ ಎರಡು ವರ್ಷಗಳಿಂದ ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದನು. ನಂತರ ಆತನ ವರ್ತನೆಗೆ ಒಬ್ಬ ಮಗ ಹಾಗೂ ಆತನ ಪತ್ನಿ ಮನೆಯನ್ನು ಬಿಟ್ಟು ಬಾಡಿಗೆ ಮನೆ ಮಾಡಿಕೊಂಡು ಇದ್ದಾರೆ. ಅಸ್ವಸ್ಥನಾದವನು ದಿನ ಕಳೆಯುತ್ತಿದ್ದಂತೆ ಹೊಟ್ಟೆ ಹಸಿದಾಗ ಬಿಕ್ಷೆ ಬೇಡಿಕೊಂಡು ತಿಂದು ಬಿಕ್ಷೆ ನೀಡಿದವರಿಗೆ ಬೈಯುತ್ತಾ ಅರೆಬೆತ್ತಲಾಗಿ ಓಡಾಡತೋಡಗಿದ್ದನು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು ಪಟ್ಟಣದ ಜನತೆಗೆ ಮಾನಸಿಕ ಅಸ್ವಸ್ಥ ಓಣಿಯಲ್ಲಿ ಬಂದರೆ ಸಾಕು ಇದೆನಪ್ಪ ನಮ್ಮ ಕರ್ಮ ಎನ್ನುತ್ತಾ ಮನೆಯ ಬಾಗಿಲನ್ನು ಹಾಕಿಕೊಳ್ಳುತ್ತಿದ್ದರು. ಆದರೂ ಈತನ ಅಸ್ವಸ್ಥತೆಯನ್ನು ಮನೆಯವರು ಸರಿಪಡಿಸುವ ಕೆಲಸಕ್ಕೂ ಹೋಗಿಲ್ಲ ಆದರೆ ಪಟ್ಟಣದ ಹಳೂರ ಓಣಿಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಶೌರ್ಯ ಎಂಬ ತಂಡದ 17 ಜನರ ಯುವಕರ ಪಡೆ ಇಂದು ಅರೆಬೆತ್ತಲಾಗಿ ಓಡಾಡುತ್ತಿದ್ದ ಅಸ್ವಸ್ಥನಾದವನನ್ನು ಕರೆತಂದು ಮನೆಗೆ ಬಿಗ ಹಾಕಿ ಹೋದ ಆತನ ಹೆಂಡತಿಯನ್ನು ಕರೆಯಿಸಿ ಆತನಿಗೆ ಉದ್ದವಾಗಿ ಬೆಳೆದ ತಲೆಯ ಕೂದಲು ಕಟಿಂಗ್ ಮಾಡಿಸಿ ಹಾಗೂ ಸೇವಿಂಗ ಮಾಡಿಸಿ ಬಿಸಿ ನೀರಿನಿಂದ ಸ್ನಾನವನ್ನು ಮಾಡಿಸಿ ಹೊಸ ಬಟ್ಟೆ ಹಾಕಿ ಉಪಚಾರ ಮಾಡಿ ಹೊರಗಡೆ ಅನಾವಶ್ಯಕ ತೀರುಗಾಡದಂತೆ ತಿಳುವಳಿಕೆ ನೀಡಿ ಆತನ ಮನೆಯಲ್ಲಿ ಬೀಡುವುದರ ಮೂಲಕ ಮಾನವಿಯತೆ ಮೇರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿದಾನಂದ ಬಡಿಗೇರ, ಮಂಜುನಾಥ ರಾಣೆಗೇರ, ಬಸವರಾಜ ಮುತ್ತಳ್ಳಿ, ಮಂಜುನಾಥ ಹುಲಿಯಪ್ಪನವರ, ಜಬೀಯುಲ್ಲಾ ಹಾನಗಲ್, ರಕ್ಷಕ ಪಾಟೀಲ್, ಮಣಿ ಬಾಬಣ್ಣವರ, ಸುದೀರ ಪಾಟೀಲ್, ರಮೇಶ ಮುತ್ತಳ್ಳಿ, ರವಿ ಮುತ್ತಳ್ಳಿ, ಸುಧೀಪ ಭದ್ರಾಪೂರ ಚೇತನ ರಾಣೆಗೇರ, ಪ್ರಕಾಶ ಬೆಂಡ್ಲಗಟ್ಟಿ, ವಿರೇಶ ಭೋವಿ, ಹನ್ಮಂತ ಭೋವಿ ಮುಂತಾದವರು ಕಾರ್ಯಾಚರಣೆಯಲ್ಲಿದ್ದರು.