• Slide
    Slide
    Slide
    previous arrow
    next arrow
  • ಭಗವಂತ‌ ಮೆಚ್ಚುವ ರೀತಿ‌ ಆರಾಧ್ಯ ಕಲಾ ಸೇವೆ ಮಾಡುವೆ; ಜಿ.ಎಲ್.ಹೆಗಡೆ ಇಂಗಿತ

    300x250 AD

    ಸಿದ್ದಾಪುರ: ಭಗವಂತನೇ ಕೊಡಿಸಿದ ಹುದ್ದೆ. ಅವನೇ ಮೆಚ್ಚುವ ರೀತಿಯಲ್ಲಿ ಆರಾಧ್ಯ ಕಲಾ ಸೇವೆ  ಮಾಡುವೆ ಎಂದು ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಜಿ.ಎಲ್.ಹೆಗಡೆ ಹೇಳಿದರು.


    ಅವರು ತಾಲೂಕಿ‌ನ ಯಕ್ಷ ನಾಟ್ಯ ವಿನಾಯಕ ದೇವಾಲಯದಲ್ಲಿ ಅಕಾಡೆಮಿ ಅಧ್ಯಕ್ಷ ಸ್ಥಾನದ ಗೌರವ ಹುದ್ದೆ ಸ್ವೀಕರಿಸಿದ ಕಾರಣಕ್ಕೆ‌ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನಗೆ ಸ್ಥಾನ, ಹಣ ಅಥವಾ ಅಧಿಕಾರದ ಮೋಹವಿಲ್ಲ.  ಆದರೆ, ಕಲೆಗೆ ಆಗಬೇಕಾದ ಸೇವಾ ಕಾರ್ಯಗಳನ್ನು ಮಾಡಬೇಕು. ಅದೊಂದೇ ಗುರಿ. ಆಗಲೇ ಭಗವಂತ‌ ಮೆಚ್ಚುತ್ತಾನೆ ಎಂದ ಹೆಗಡೆ, ಯಕ್ಷಗಾನ, ಮೂಡಲಪಾಯ, ಘಟ್ಟದ ಕೋರೆಗಳಿಗೆ ಆಗಬೇಕಾದ ಕಾರ್ಯಗಳ ಪಟ್ಟಿ ದೊಡ್ಡದಿದೆ ಎಂದರು.


    ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಸುನೀಲಕುಮಾರ, ಶಿವರಾಮ ಹೆಬ್ಬಾರ, ಸಿಎಂ ಬಸವರಾಜ್ ಬೊಮ್ಮಾಯಿ ಅವರೂ ಕೂಡ ಯಕ್ಷಗಾನದ ಅಕಾಡೆಮಿಯ ಉದ್ದೇಶಿತ ಕಾರ್ಯಗಳಿಗೆ ಬೆಂಬಲ ನೀಡುವದಾಗಿ ತಿಳಿಸಿದ್ದಾರೆ. ಒಂದಿಷ್ಟು ಹೊಸ ಆಲೋಚನೆಗಳಿಗೆ ಅಧಿಕಾರಿಗಳ ತಂಡ ಬೆಂಬಲ ಸೂಚಿಸಿದೆ. ಎಲ್ಲರೂ ಸೇರಿ ರಚನಾತ್ಮಕ ಚಟುವಟಿಕೆ ನಡೆಸುವ ಇಂಗಿತ ಕೂಡ ಹೊಂದಿದ್ದೇವೆ ಎಂದ ಜಿ.ಎಲ್. ಹೆಗಡೆ, ಯಕ್ಷಗಾನ ಉಳಿದರೆ ಕನ್ನಡವೂ ಉಳಿಯುತ್ತದೆ‌. ಅಂಥ ಕಲೆಗೆ ಒಂದಿಷ್ಟು ನಿರಾತಂಕದ ಕೊಡುಗೆಗಳು ಸಿಗುವಂತೆ ಮಾಡಬೇಕಾಗಿದೆ ಎಂದರು.

    300x250 AD


    ಡಾ. ಹೆಗಡೆ ಅವರಿಗೆ ಸಮ್ಮಾನ ನಡೆಸಿದ ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಮಾತನಾಡಿ, ಯೋಗ್ಯ ವ್ಯಕ್ತಿಗೆ ಇಂಥ ಹುದ್ದೆ ಸಿಕ್ಕಿದೆ. ಅವರ ಕಾಲದಲ್ಲಿ‌ ನಾಡು‌ ಮೆಚ್ಚುವ ಕಾರ್ಯ ಆಗಲಿ ಎಂದರು.


    ಇದೇ ವೇಳೆ ಮಾಯಾ ಜಿ.ಹೆಗಡೆ ಅವರನ್ನು ರಷ್ಮಿ ಹೆಗಡೆ ಗೌರವಿಸಿದರು. ಅಕಾಡಮಿ‌ ರಜಿಸ್ಟ್ರಾರ ಎಚ್. ಜಿ.ಶಿವರುದ್ರಪ್ಪ, ಸ್ಥಳೀಯ ಪ್ರಮುಖರಾದ ಸುರೇಶ ಶಾ. ಹೆಗಡೆ ತಾರಗೋಡ, ನವೀನ ಭಾಸ್ಕರ ಹೆಗಡೆ, ವಿ.ವಿನಯ‌ ಕೃಷ್ಣಮೂರ್ತಿ  ಬೈಲಳ್ಳಿ, ಗಣಪತಿ ಸೀ.ಹೆಗಡೆ ಹೊನ್ನೇಕೈ,ವಿಘ್ನೇಶ್ವರ ಗೌಡ ಕೆಸರಕೊಪ್ಪ, ವಸಂತ ಹೆಗಡೆ ಕಾಂತಿವನ, ಅಶೋಕ ನಾಯ್ಕ‌ ಕುಮಟಾ ಇತರರು ಇದ್ದರು.

    ಯಕ್ಷಗಾನ ಆರಾಧನಾ‌ ಕಲೆ. ದೇವಸ್ಥಾನ‌ ಆಶ್ರಯದಲ್ಲಿ ಬದುಕಿ ಬಂದಿದೆ, ಬೆಳೆದು ಬಂದಿದೆ. ಯಕ್ಷಗಾನ ಎಂದರೆ ದೇವರ ಸೇವೆ. – ಡಾ.ಜಿ.ಎಲ್.ಹೆಗಡೆ, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

    Share This
    300x250 AD
    300x250 AD
    300x250 AD
    Leaderboard Ad
    Back to top