Slide
Slide
Slide
previous arrow
next arrow

ಸಮೀಕ್ಷೆ: NDA ಸರ್ಕಾರ ಆರ್ಥಿಕತೆಯನ್ನು ಉತ್ತಮವಾಗಿ ನಿರ್ವಹಿಸಿದೆ ಎಂದ 52% ಜನ

300x250 AD

ನವದೆಹಲಿ: ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 52 ಜನರು ಬಿಜೆಪಿ ನೇತೃತ್ವದ ಎನ್‌ಡಿಎ ಆರ್ಥಿಕತೆಯನ್ನು ‘ಉತ್ತಮ’ ರೀತಿಯಲ್ಲಿ ನಿರ್ವಹಿಸಿದೆ ಎಂದು ಹೇಳಿದ್ದಾರೆ. ಇನ್ನು ಶೇ.26ರಷ್ಟು ಮಂದಿ  ‘ಸಾಧಾರಣ’ ಎಂದು ಹೇಳಿದರೆ, ಶೇ.19ರಷ್ಟು ಮಂದಿ ‘ಕಳಪೆ’ ಎಂದು ಹೇಳಿದ್ದಾರೆ.

ಅಲ್ಲದೇ ಈಗಲೇ ಚುನಾವಣೆ ನಡೆದರೆ ನರೇಂದ್ರ ಮೋದಿ ನೇತೃತ್ವತದಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ.

ಶೇ. 60 ರಷ್ಟು ಜನರು ಕೋವಿಡ್ -19 ಸಾಂಕ್ರಾಮಿಕದ ಆರ್ಥಿಕ ಕುಸಿತವನ್ನು ಎದುರಿಸಲು ಕೇಂದ್ರ ಸರ್ಕಾರವು ಸಾಕಷ್ಟು ಮಾಡಿದೆ ಎಂದು ಹೇಳಿದ್ದಾರೆ.

ಶೇಕಡಾ 67 ರಷ್ಟು ಜನರು ಈಗ ದೈನಂದಿನ ಖರ್ಚುಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಮತ್ತೊಂದು ಶೇಕಡಾ 24 ರಷ್ಟು ಜನರು ತಮ್ಮ ಖರ್ಚುಗಳನ್ನು ಹೆಚ್ಚಿಸಿದ್ದಾರೆ ಆದರೆ  ಆ ಖರ್ಚನ್ನು ನಿರ್ವಹಿಸುವ ಮಾರ್ಗವನ್ನು ಅವರು ಕಂಡುಕೊಂಡಿದ್ದಾರೆ.

300x250 AD

ಶೇಕಡಾ 65 ರಷ್ಟು ಜನರು ತಮ್ಮ ಆರ್ಥಿಕ ಸ್ಥಿತಿ 2014 ರಿಂದ ಹದಗೆಟ್ಟಿದೆ ಅಥವಾ ಹಾಗೆಯೇ ಉಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, 33 ಶೇಕಡಾ ಜನರು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆಎ, ದೇಶದ ಜನಸಂಖ್ಯೆಗೆ ಲಸಿಕೆ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನಗಳು ‘ಉತ್ತಮ’ ಎಂದು ಶೇಕಡಾ 82 ರಷ್ಟು ಜನರು ಹೇಳಿದ್ದಾರೆ. 8 ಪ್ರತಿಶತ ಜನರು ಇದನ್ನು ‘ಸರಾಸರಿ’ ಎಂದು ಕರೆದರೆ, ಶೇಕಡಾ 7 ಮಂದಿ  ‘ಕಳಪೆ’ ಎಂದು ಹೇಳಿದ್ದಾರೆ.

Share This
300x250 AD
300x250 AD
300x250 AD
Back to top