
ಶಿರಸಿ: ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಬ್ಬಂದಿಯಾದ ನಾಗೇಂದ್ರ ವೆಂಕಟ್ರಮಣ ಹೆಗಡೆ ಕುಂಬ್ರಿಗದ್ದೆ ಇವರನ್ನು ಇತ್ತಿಚೆಗೆ ಸಂಘದ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಇವರು ಕಳೆದ 28 ವರ್ಷಗಳಿಂದ ಸಂಘದಲ್ಲಿ ಹಾಲು ಪರೀಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು, ಹಾಲು ಉತ್ಪಾದಕ ಸದಸ್ಯರು ಹಾಜರಿದ್ದರು.