ಕಾರವಾರ: ಚಿಪ್ಪಿಕಲ್ಲು ತೆಗೆಯಲು ಹೋದ ವ್ಯಕ್ತಿಯೋರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಾರವಾರದ ಲೇಡಿಸ್ ಬೀಚ್ ಬಳಿ ನಡೆದಿದೆ.
ಕಾರವಾರ ಕೋಡಿಭಾಗದ ನಿವಾಸಿ ಪ್ರಶಾಂತ (47) ಮೃತ ವ್ಯಕ್ತಿ. ಚಿಪ್ಪಿಕಲ್ಲು ತೆಗೆಯಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೃತದೇಹ ಲೇಡೀಸ್ ಬೀಚ್ ಬಳಿ ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.