ಶಿರಸಿ: ಇಲ್ಲಿನ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯು ಸರಕಾರದ ನಿಯಮಾವಳಿಗಳ ಪ್ರಕಾರ, ತಾಲೂಕು ಆಡಳಿತ ಶಿರಸಿ, ಗಂಗಾಮತಸ್ತರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶಿರಸಿ ಗಂಗಾಮಾತ ಅಂಬಿಗರ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಸರಳ ರೀತಿಯಿಂದ ಜರುಗಿತು.
ಈ ಸಮಾರಂಭದಲ್ಲಿ ತಾಲೂಕು ಆಡಳಿತ ಪರವಾಗಿ ತಹಶೀಲ್ದಾರ ಕುಲಕರ್ಣಿ ಉದ್ಘಾಟಿಸಿದರು, ದ್ಯಾಮಣ್ಣ.ಉ. ದೊಡ್ಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ .ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಉ.ಏ. ರಾಮಪ್ಪ,ಅರವಿ0ದ ತೇಲಗುಂದ, ಕೋರ್ಲಕಟ್ಟಾ, ಶ್ರೀರಾಮಮೂರ್ತಿ ಬೋವಿ, ಮಾಲತೇಶ ದನಗನಹಳ್ಳಿ, ಪುರೋಶೋತ್ತಮ ಕಲ್ಮನೆ, ಇತರೆ ಸಮಾಜದ ಗಣ್ಯರು ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.
ದಿನೇಶ ಕುಮಾರ ಸಿ ಮಶಾಲ್ಡಿ ಅತಿಥಿಗಳನ್ನು ಸ್ವಾಗತಿಸಿದರು, ಸಭೆಯನ್ನುದ್ದೇಶಿಸಿ ದ್ಯಾಮಣ್ಣ ದೊಡ್ಮನಿ, ವೀಣಾ ಶೆಟ್ಟಿ, ಕುಲಕರ್ಣಿ ತಹಶೀಲ್ದಾರ ಮಾತನಾಡಿದರು. ಉ.ಏ. ರಾಮಪ್ಪನವರು ನಿಜಶರಣ ಅಂಬಿಗರ ಚೌಡಯ್ಯ ನವರ ವಚನಗಳ ಸಹಿತ ಮನಮುಟ್ಟುವಂತೆ ಉಪನ್ಯಾಸ ನೀಡಿದರು. ಕೊನೆಯಲ್ಲಿ ಕಸ್ತೂರಿ ಯವರು ವಂದನಾರ್ಪಣೆ ಮಾಡಿದರು.
ಸರಕಾರದ ನಿಯಮವಾಳಿ ಪ್ರಕಾರ ಸರಳವಾಗಿ, ಅಚ್ಚುಕಟ್ಟಾಗಿ ಸಮಾರಂಭ ಜರುಗಿತು. ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಗೆ ಆಗಮಿಸಿದ ಸಮಾಜ ಬಾಂಧವರಿಗೆ, ಅಧಿಕಾರಿ ವರ್ಗದವರಿಗೆ, ಶಿರಸಿ ತಾಲೂಕಾ ಗಂಗಾಮತಸ್ತರ ಕ್ಷೇಮಾಭಿವೃದ್ಧಿ ಸಂಘವು ಅಭಿನಂದಿಸಿದೆ.