ಶಿರಸಿ: ಗುಣಮಟ್ಟದ ಸಾಂಬಾರ ಪದಾರ್ಥಗಳು ಮತ್ತು ಇನ್ನಿತರ ಕೃಷಿ ಸಂಬಂಧಿತ ಬೆಳೆಗಳಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಆವಾರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಗುರುವಾರ ಉದ್ಘಾಟಿಸಿದರು.
ಈ ವೇಳೆ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಇಲ್ಲಿಯ ಸಾಂಬಾರ ಪದಾರ್ಥ ಹಾಗು ಗುಣಮಟ್ಟದ ಹೋಮ್ ಪ್ರೊಡಕ್ಟ್ ಗಳಿರುವ ಸೂಪರ್ ಮಾರ್ಕೆಟ್ ವೀಕ್ಷಿಸಿ, ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ, ಒಕ್ಕೂಟದ ಎಂ.ಡಿ. ಕೆ.ಎಂ.ಲೋಹಿತೇಶ್ವರ, ಕದಂಬ ಸಂಸ್ಥೆ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಭಟ್ಟ ಕೋಟೆಮನೆ, ಒಕ್ಕೂಟದ ನಿರ್ದೇಶಕರಾದ ಶಂಕರ ಹೆಗಡೆ, ವಿ.ಪಿ. ನಾಯ್ಕ ಇದ್ದರು.