ಶಿರಸಿ: ಕ್ಷತ್ರೀಯ ಮರಾಠಾ ಹಾಗೂ ಆ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಅರೆಮರಾಠಾ, ಸಮುದಾಯಗಳ ನಾಯಕರಾಗಿರುವ ಶ್ರೀಕಾಂತ ಎಲ್. ಘೋಟ್ನೇಕರ ಅವರು ಹಳಿಯಾಳ ವಿಧಾನ ಸಭಾ ಕ್ಷೇತ್ರದಿಂದ 2023ರ ಸಾರ್ವತ್ರಿಕ ವಿಧಾನ ಸಭೆಗೆ ಸ್ಪರ್ಧಿಸಲು ಎಲ್ಲ ರೀತಿಯಿಂದ ಸಂಘಟನೆ, ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸಹಿಸದ ಕೆಲ ಪಟ್ಟಪದ್ದ ಹಿತಾಸಕ್ತಿಗಳು ಘೋಟ್ನೇಕರ ರವರ ತೇಜೋವಧೆ, ವಿನಾಕಾರಣ ಕಿರುಕುಳ, ಆಪಾದನೆಗಳನ್ನು ಮಾಡುತ್ತಿದ್ದಾರೆ. ಯಾರೇ ಎಷ್ಟೇ ಆಪಾದನೆ, ತೇಜೋವದೆ ಮಾಡಿದರೂ ಜಿಲ್ಲೆಯ ಶೇಕಡಾ 90ರಷ್ಟು ಕ್ಷತ್ರೀಯ ಮರಾಠಿಗರ ಹಾಗೂ ಆ ಸಮುದಾಯದ ಉಪ ಪಂಗಡಗಳ ಬೆಂಬಲ ಘೋಟ್ನೇಕರ ರವರಿಗೆ ಇದೆ ಎಂದು ಜಿಲ್ಲೆಯ ಮರಾಠಾ ಸಮುದಾಯದ ಮುಖಂಡ ಪಾಂಡುರಂಗ ವಿ. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಇವರು ಶಿರಸಿ ಕೆ.ಡಿ.ಸಿ.ಸಿ. ಬ್ಯಾಂಕಿಗೆ 16 ವರ್ಷಗಳ ಅಧ್ಯಕ್ಷರಾಗಿ ಹಾಗೂ ಜಿಲ್ಲೆಯ ವಿದಾನಪರಿಷತ್ತಿನ ಸದಸ್ಯರಾಗಿ 12 ವರ್ಷಗಳವರೆಗೆ ಎಲ್ಲಾ ಸಮುದಾಯ (ಜಾತಿ) ಹಾಗೂ ಧರ್ಮದವರೊಂದಿಗೆ ಉತ್ತಮ ಬಾಂಧವ್ಯವನ್ನು ಘೋಟ್ನೇಕರ ಹೊಂದಿದ್ದಾರೆ ಎಂದು ತಿಳಿಸಿದ ಇವರು 1983 ರಿಂದ ಇಲ್ಲಿಯ ವರೆಗೂ ಹಳಿಯಾಳ ವಿದಾನ ಸಭಾ ಕ್ಷೇತ್ರದಿಂದ ಬಹುಸಂಖ್ಯಾತ ಮರಾಠಾ ಸಮುದಾಯದವರು ಇದ್ದರೂ ಶಾಸಕರಾಗಿ ಆಯ್ಕೆಗೊಂಡಿಲ್ಲ. 2023 ಕ್ಕೆ ನಮ್ಮದೇ ಸಮುದಾಯದ ಘೋಟ್ನೇಕರ ಶಾಸಕರಾಗುವ ಎಲ್ಲ ರೀತಿಯ ಅವಕಾಶ ಅವರಿಗೆ ಇದೆ ಹೀಗಾಗಿ ಅವರಿಗೆ ಸಂಪೂರ್ಣ ಜಿಲ್ಲೆಯ ಮರಾಠಿಗರ ಬೆಂಬಲ ಇದೆ. ಸದ್ಯದಲ್ಲೇ ಹಳಿಯಾಳದಲ್ಲಿ ಮರಾಠಾ ಸಮುದಾಯದವರ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಘೋಟ್ನೇಕರ ಪರ ಶಕ್ತಿಯನ್ನು ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.
2008ರ ಸಾರ್ವತ್ರಿಕ ಚುನಾವಣೆ:- 2008ರ ಸಾರ್ವತ್ರಿಕ ವಿದಾನಸಭಾ ಚುನಾವಣೆಯ ಪೂರ್ವದಲ್ಲಿ ಮರಾಠಾ ಸಮುದಾಯದ ಮುಖಂಡ ವಿಜಯೇಂದ್ರ ಜಾಧವರವರು ಎಲ್ಲ ರೀತಿಯಿಂದ ಸಂಘಟನೆಯನ್ನು ಮಾಡಿದ್ದರೂ ಇದರಿಂದ ಬಿ.ಜೆ.ಪಿ.ಯ ರಾಜ್ಯ ನಾಯಕರು 2008ರ ವಿಧಾನ ಸಭಾ ಚುನಾವಣೆಗೆ ಹಳಿಯಾಳ ವಿಧಾನ ಸಭಾಕ್ಷೇತ್ರದಿಂದ ಇವರಿಗೆ ಮೊದಲು ಟಿಕೆಟ್ ಘೋಷಿಸಿದರು. ಆದರೆ ಕೊನೆ ಘಳಿಗೆಯಲ್ಲಿ ಕೆಲ ಪಟ್ಟಪದ್ದ ಹಿತಾಸಕ್ತಿಗಳಿಂದ ಜಾಧವ ಅವರಿಗೆ ಬಿ.ಜೆ.ಪಿಯ ಬಿ. ಪಾರಂ. ಸಿಗಲಿಲ್ಲ ಎಂದು ತಿಳಿಸಿದರು.