ಅಂಕೋಲಾ: ಕೇಂದ್ರ ಸರಕಾರದ ಮಹತ್ವದ ಯೋಜನೆಯಲ್ಲೊಂದಾದ ಗ್ರಾಮ ಸಡಕ ಯೋಜನೆಯಿಂದ ಸರಕಾರ ಪ್ರತಿಯೊಂದು ಗ್ರಾಮಗಳಲ್ಲಿ ರಸ್ತೆ ನಿರ್ಮಾಣದ ಗುರಿ ಹೊಂದಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಸುಂಕಸಾಳ ರಾ.ಹೆ 63ರಿಂದ ಕರಗದ್ದೆಗೆ ತೆರಳುವ ಕೋಟೆಪಾಲ ರಸ್ತೆಯ 5.47 ಕಿಮಿ ಉದ್ದದ ಅಂದಾಜು 3 ಕೋಟಿ 80 ಲಕ್ಷದ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೆರಿಸಿ ಮಾತನಾಡಿ ದೇಶದ ಪ್ರತಿ ಹಳ್ಳಿಗಳಲ್ಲಿಯು ರಸ್ತೆ ನಿಉರ್ಮಿಸುವ ಗುರಿಯೊಂದಿಗೆ ಗ್ರಾಮ ಸಡಕ ಯೋಜನೆಯನ್ನು ದಿ. ಅಟಲ್ ಬಿಹಾರಿ ವಾಜಪೇಯಿಯವರ ಕನಸಾಗಿತ್ತು. ಯುಪಿಎ ಸರಕಾರದ ಅವದಿಯಲ್ಲಿ ಈ ಯೋಜನೆಗಳಿಗೆ ಅನುಧಾನ ನೀಡದ ಕಾರಣ ಈ ಯೋಜನೆಯನ್ನು ದೇಶದಾದ್ಯಂತ ಅನುಷ್ಠಾನಗೋಳಿಸಲು ಮತ್ತೆ ಬಿಜೆಪಿ ಸರಕಾರ ಬರಬೇಕಾಯಿತು ಎಂದು ಹೇಳಿದರು.
ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಹಿಂದೆ ಇದ್ದ ಶಾಸಕರು ಉಸ್ತುವಾರಿ ಸಚಿವರು ಸಂಸದರು ತಂದ ಕೆಲಸದ ಶಂಕುಸ್ಥಾಪನೆ ಮಾಡಿ ಕೈ ತೊಳೆದು ಕೊಳ್ಳುತ್ತಿದ್ದರು. ಯಾವ ಶಂಕುಸ್ಥಾಪನೆಗು ಸಂಸದರು ಬಾರದ ಕಾರಣ ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿದ್ದರು. ಇದರಿಂದ ಸಂಸದರು ಯಾವ ಕೆಲಸ ಮಾಡುತ್ತಿಲ್ಲ ಎಂದು ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದರು. ಸಂಸದರು ಎಲ್ಲಿಯು ಕಾಣಿಸಿಕೊಳ್ಳದಿದ್ದರು ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರವಿದೆ. ರಾಜ್ಯದಲ್ಲಿಯು ನಮ್ಮದೆ ಸರಕಾರವಿದೆ. ಆದ್ದರಿಂದ ಇನ್ನೂ ಮುಂದೆ ನಮ್ಮ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಎಂಎಲ್‍ಸಿ ಶಾಂತರಾಮ ಸಿದ್ದಿ, ಜಿಲ್ಲಾ ಬಿಜೆಪಿ ಮಾದ್ಯಮ ವಕ್ತಾರ ನಾಗರಾಜ ನಾಯಕ, ಸುಂಕಸಾಳ ಗ್ರಾ.ಪಂ ಅಧ್ಯಕ್ಷ ಸದಾನಂದ ನಾಯ್ಕ, ಉಪಾಧ್ಯಕ್ಷೆ ಉಮಾ ಸಿದ್ದಿ, ಬಿಜೆಪಿ ಮಂಡಲಾಧ್ಯಕ್ಷ ಸಂಜಯ ನಾಯ್ಕ ಬಾವಿಕೇರಿ, ಪ್ರಮುಖರಾದ ನಿತ್ಯಾನಂದ ಗಾಂವಕರ, ಜಗದೀಶ ನಾಯಕ ಮೋಗಟಾ, ಬಾಸ್ಕರ ನಾರ್ವೇಕರ, ರಾಜೇಂದ್ರ ನಾಯ್ಕ, ರಾಘು ಬಟ್, ತಹಶೀಲ್ದಾರ ಉದಯ ಕುಂಬಾರ, ತಾ.ಪಂ ಇಓ ಪರುಶುರಾಮ ಸಾವಂತ, ಪಿಡಿಒ ಗಿರೀಶ ನಾಯಕ ಇದ್ದರು.