ಮುಂಡಗೋಡ: ತಾಲೂಕಿನ ಕಾತೂರ ಗ್ರಾಪಂ ವ್ಯಾಪ್ತಿಯ ಮರಗಡಿ ಭಾಗದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಭತ್ತದ ಬಣವೆಗಳನ್ನು ಕಿತ್ತು ಹಾನಿಪಡಿಸಿದ ಘಟನೆ ಜರುಗಿದೆ.
ಕಳೆದ ಎರಡು ತಿಂಗಳುಗಳಿಂದ ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಪ್ರತಿದಿನವೂ ಒಂದೊಂದು ಕಡೆಗಳಲ್ಲಿ ದಾಳಿ ನಡೆಸಿ ಬೆಳೆಗಳನ್ನು ನಾಶಪಡಿಸುತ್ತಿದ್ದುನಾಲೈದು ದಿನಗಳಿಂದ ಮರಗಡಿ, ನಾಗನೂರ, ಹನಮಾಪುರ, ಶಿಂಗ್ನಳ್ಳಿ ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳು, ಭತ್ತದ ಬಣವೆಗಳು ಹಾಗೂ ಗೋವಿನಜೋಳ, ಅಡಿಕೆ, ಬಾಳೆ ಬೆಳೆಗಳನ್ನು ನಾಶಪಡಿಸುತ್ತಿವೆ.ಶಿವಾನಂದ ಮೇಲಿನಮನಿ, ಹನ್ಮಂತಪ್ಪ ಯಲ್ಲಾಪುರ, ತಿಪ್ಪಣ್ಣ ಕೋಟಳ್ಳಿ, ಮಲ್ಲಿಕಾರ್ಜುನ ಪಾಟೀಲ, ರಾಮನಗೌಡ ಪಾಟೀಲ ಎಂಬುವರ ಬೆಳೆಗಳನ್ನು ನಾಶ ಪಡಿಸಿದ್ದು ಇದರಿಂದ ಲಕ್ಷಾಂತರ ರು.ಹಾನಿ ಸಂಭವಿಸಿದ್ದು ಕಾತೂರ ಉಪ ವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಂಚನಾಮೆ ಮಾಡಿದ್ದಾರೆ.
ಕಾಡಾನೆಗಳನ್ನು ತಾಲೂಕಿನಿಂದ ಓಡಿಸುವಂತೆ ರೈತರು ಅರಣ್ಯ ಇಲಾಖೆಯವರನ್ನು ಆಗ್ರಹಿಸುತ್ತಿದ್ದಾರೆ.