
ಯಲ್ಲಾಪುರ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ಪಟ್ಟಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾಗಿ ಲೋಕಧ್ವನಿ ವರದಿಗಾರ ಕೆ.ಎಸ್.ಭಟ್ಟ, ಉಪಾಧ್ಯಕ್ಷರಾಗಿ ವಿಜಯಕರ್ನಾಟಕ ವರದಿಗಾರ ಜಿ.ಎನ್.ಭಟ್ಟ ತಟ್ಟೀಗದ್ದೆ ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾರ ಶ್ರೀಧರ ಅಣಲಗಾರ್ , ಖಜಾಂಚಿಯಾಗಿ ಹೊಸದಿಗಂತ ಪತ್ರಿಕೆಯ ಪ್ರಭಾವತಿ ಗೋವಿ, ಸಹ ಕಾರ್ಯದರ್ಶಿಯಾಗಿ ಕರಾವಳಿಮುಂಜಾವಿನ ಕೇಬಲ್ ನಾಗೇಶ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಧಾಕೃಷ್ಣ ಭಟ್ಟ ಭಟ್ಕಳ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು,
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಜಿ.ಸುಬ್ರಾಯ ಬಕ್ಕಳ, ಜಿಲ್ಲಾ ಸಮಿತಿಯ ಬಸವರಾಜ ಪಾಟೀಲ್, ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ ಶಿರಸಿ ಇದ್ದರು.