• Slide
    Slide
    Slide
    previous arrow
    next arrow
  • ಶಮಾನೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವ – ಅಪ್ಪು ಅಮರ ಕಾರ್ಯಕ್ರಮ

    300x250 AD

    ಶಿರಸಿ:ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಧ್ರುವತಾರೆ ಸಾಂಸ್ಕøತಿಕ ವೇದಿಕೆ ಉತ್ತರ ಕನ್ನಡ ಜಿಲ್ಲಾ ಘಟಕದ ದಶಮಾನೋತ್ಸವದ ಪ್ರಯುಕ್ತ ಹತ್ತನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಅಪ್ಪು ಅಮರ ಕಾರ್ಯಕ್ರಮವನ್ನು ಜ14 ರಂದು ಆಯೋಜಿಸಲಾಗಿತ್ತು. ಆ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಹಾಗೂ ನೇತ್ರದಾನ ನೊಂದಣಿ ಶಿಬಿರ, ಸಾಧಕರಿಗೆ ಸನ್ಮಾನ, ಪುಸ್ತಕ ಲೋಕಾರ್ಪಣೆ, ಅಪ್ಪು ನುಡಿನಮನ, ಗೀತನಮನ ಕಾರ್ಯಕ್ರಮಗಳು ಜರುಗಿದವು.

    ಬೆಳಿಗ್ಗೆ 9-30ಕ್ಕೆ ಸ್ವಯಂ ಪ್ರೇರಿತ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಶಿಬಿರವನ್ನು ಲಯನ್ಸ್ ನಯನ ನೇತ್ರ ಭಂಡಾರ ಗಣೇಶ ನೇತ್ರಾಲಯ, ಶಿರಸಿ ಹಾಗೂ ಪಂಡಿತ ಸಾರ್ವಜನಿಕ ಆಸ್ಪತ್ರೆ ಐ. ಎಂ. ಎ. ಬ್ಲಡ್ ಬ್ಯಾಂಕ್, ಶಿರಸಿಯವರ ಸಹಕಾರದೊಂದಿಗೆ ಸಂಘಟಿಸಿದ್ದು ಬೆಳಗಿನ ಶಿಬಿರಗಳ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀ ಗಣಪತಿ ನಾಯ್ಕ ಅಧ್ಯಕ್ಷರು, ನಗರ ಸಭೆ ಶಿರಸಿರವರು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಸಮಾಜ ಮುಖಿ ಕಾರ್ಯಗಳು ಜನರಲ್ಲಿ ಸಾಮೂಹಿಕ ಒಂದೊಳ್ಳೆ ಸಂದೇಶವನ್ನು ನೀಡುತ್ತದೆ. ಆ ದಿಶೆಯಲ್ಲಿ ಧ್ರುವತಾರೆ ಸಾಂಸ್ಕ್ರತಿಕ ವೇದಿಕೆಯ ಕಾರ್ಯ ಶ್ಲಾಘನೀಯವಾದದ್ದು ಇನ್ನಷ್ಟು ಉತ್ತಮ ಕಾರ್ಯಗಳು ಈ ವೇದಿಕೆಯಿಂದ ಆಗಲೀ ಹೆಚ್ಚೆಚ್ಚು ಜನರು ಭಾಗವಹಿಸುವಿಕೆಯೊಂದಿಗೆ ಇಂಥಹ ಕಾರ್ಯಗಳಿಗೆ ಜನರು ಪ್ರೋತ್ಸಾಹಿಸಬೇಕು ಎಂದರು.

    ದಿ. ಪುನೀತ್ ರಾಜಕುಮಾರ ಹಾಗೂ ಕನ್ನಡಾಂಬೆ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿರಸಿಯ ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಶ್ರೀ ಭೀಮಣ್ಣ ನಾಯ್ಕರವರು ಪುನೀತರಾಜಕುಮಾರರವರ ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಸೇವೆ ಹಾಗೂ ಸಂದೇಶವನ್ನು ಪ್ರಶಂಸಿದರು. ಕನ್ನಡ ನಾಡು-ನುಡಿ ಹೆಚ್ಚೆಚ್ಚು ಶ್ರಮಿಸಲಿ ಎಂದು ಶುಭ ಹಾರೈಸಿ ಅವರ ಮತ್ತು ಪುನೀತ ರಾಜಕುಮಾರರವರ ಒಡನಾಟವನ್ನು ಸ್ಮರಿಸಿದರು.

    ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯುವನೇತಾರರು ಹಾಗೂ ಸಮಾಜ ಸೇವಕರಾದ ಶ್ರೀ ದೀಪಕ ಹೆಗಡೆ ದೊಡ್ಡೂರುರವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಾಹಿತ್ಯಕ ಕಾರ್ಯ ಮಾಡುತ್ತಿರುವ ಧ್ರುವತಾರೆ ವೇದಿಕೆಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಇಂಥಹ ಉತ್ತಮ ಕಾರ್ಯಕ್ರಮಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಬೇಕಿದೆ ಎಂದು ಕಿವಿ ಮಾತನ್ನು ಹೇಳಿದರು. ಇಂಥಹ ಕಾರ್ಯಗಳಿಗೆ ಸದಾ ತಮ್ಮ ಬೆಂಬಲ ಮತ್ತು ಸಹಕಾರವು ಯಾವತ್ತೂ ಇರುತ್ತದೆ. ಎಂದು ಶುಭ ಹಾರೈಸಿದರು.

    ನೇತ್ರದಾನ ನೋಂದಣಿ ಶಿಬಿರ ನಡೆಸಿ ಕೊಡಲು ಆಗಮಿಸಿದ ಶಿರಸಿಯ ಗಣೇಶ ನೇತ್ರಾಲಯ ತಜ್ಞ ವೈದ್ಯರಾದ ಶ್ರೀ ಕೆ.ವಿ. ಶಿವರಾಂ ರವರು ನೇತ್ರದಾನದ ನಿಯಮಗಳನ್ನು ವಿವರಿಸಿದರು. ಮತ್ತು ಜನರಲ್ಲಿ ಆ ಕುರಿತು ಇದ್ದ ತಪ್ಪು ಗೃಹಿಕೆಯನ್ನು ತಿಳಿಸಿ ಯಾರೇ ಯಾವಾಗ ಬೇಕಾದರೂ ನೇತ್ರದಾನ ನೋಂದಣಿ ಮಾಡಲು ಮುಂದೆ ಬಂದರೆ ಅದಕ್ಕೆ ತಮ್ಮ ನೇತ್ರಾಲಯ ಸಹಕರಿಸುತ್ತದೆ. ಎಂದು ವೇದಿಕೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

    ರಕ್ತದಾನ ಶಿಬಿರವನ್ನು ನಡೆಸಿಕೊಡಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಖ್ಯಾತ ವೈದ್ಯರಾದ ಶ್ರೀಮತಿ ಡಾ. ಸುಮನ ಹೆಗಡೆಯವರು ಮಾತನಾಡಿ ರಕ್ತದಾನದ ಮಹತ್ವ ಹಾಗೂ ಅದರ ನಿಯಮಗಳ ಬಗ್ಗೆ ವಿವರಣೆ ನೀಡಿದರು. ರಕ್ತದಾನಿಗಳಲ್ಲಿರುವ ಭಯ ಆತಂಕಕ್ಕೆ ಪರಿಹಾರ ಸೂಚಿಸಿದರು. ಕಾರ್ಯಕ್ರಮದ ಕುರಿತು ತಮ್ಮ ಹಾಗೂ ವೇದಿಕೆಯ ಒಡನಾಟವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ಪ್ರಶಂಸಿಯ ನುಡಿಗಳನ್ನಾಡಿದರು.

    ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತದಂತ ವೈದ್ಯರಾದ ಶ್ರೀ ರಾಘವೇಂದ್ರ ಕಾಮತ ಹಾಗೂ ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ರಾಜು ಕದಂ, ಅರುಣ ನಾಯ್ಕ ಕೊಪ್ಪ, ಕಿಶೋರ ನೇತ್ರಕರ, ಮಂಜು ಶೆಟ್ಟಿ, ಸಂಘಟಕ ಹೆಚ್. ಗಣೇಶ ಉಪಸ್ಥಿತರಿದ್ದರು. ಸಂಘಟಕರಾದ ಹೆಚ್. ಗಣೇಶ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನ್ನಾಡಿ ಸರ್ವರನ್ನು ಸ್ವಾಗತಿಸಿದರು. ಮಂಜು ಶೆಟ್ಟಿಯವರು ಸರ್ವರನ್ನು ವಂದಿಸಿ ನಿರೂಪಿಸಿದರು.

    ರಕ್ತದಾನ ಶಿಬಿರದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು ಭಾಗವಹಿಸಿ ರಕ್ತದಾನ ಹಾಗೂ ನೇತ್ರದಾನ ನೋಂದಣಿಯನ್ನು ಮಾಡಿದರು. ಪ್ರಥಮ ರಕ್ತದಾನಿಯಾಗಿ ಉಂಚಳ್ಳಿ ಗ್ರಾ. ಪಂ. ನ ಸದಸ್ಯರಾದ ಅರುಣಕೊಪ್ಪ ತಮ್ಮ ರಕ್ತದಾನ ಮಾಡಿದರು. ದ್ವಿತೀಯರಾಗಿ ಶ್ರೀ ರಾಜು ಕದಂ ತಮ್ಮ ರಕ್ತದಾನ ಮಾಡಿದರು. ವೈದ್ಯರು ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲ ಗಣ್ಯರು ಇದಕ್ಕೆ ಸಾಕ್ಷಿಯಾದರು ನಂತರದಲ್ಲಿ ಸುಮಾರು 25-30 ಜನ ರಕ್ತದಾನ ಶಿಬಿರದಲ್ಲಿ ಹಾಗೂ ಸುಮಾರು 50-55 ನೇತ್ರದಾನ ಶಿಬಿರದಲ್ಲಿ ನೋಂದಣಿ ಮಾಡಿಸಿದರು.

    ಸಂಜೆ ನಡೆದ ಸಭಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮವನ್ನು ತಾ. ಪಂ. ಮಾಜಿ ಸದಸ್ಯರಾದ ಶ್ರೀಮತಿ ರತ್ನಾ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಇಂದಿನ ಮೊಬೈಲ್ ಯುಗದಲ್ಲಿ ಇಂಥಹ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಕೆಲಸಗಳು ಮರೆಯಾಗುತ್ತಿವೆ. ಇಂಥಹ ಸಂದರ್ಬದಲ್ಲಿ ಧ್ರುವತಾರೆ ಸಾಂಸ್ಕøತಿಕ ವೇದಿಕೆಯ ದಶಮಾನೋತ್ಸವದ ಪಯಣ ಅಭಿನಂದನಾರ್ಹ ಎಂದರು.

    300x250 AD

    ಅಧ್ಯಕ್ಷತೆಯನ್ನು ಶ್ರೀ ಜಿ. ಸುಬ್ರಾಯ ಭಟ್ಟ ಬಕ್ಕಳ ಸಂಪಾದಕರು ಸುಮುಖ ಟಿವಿ ಹಾಗೂ ಸಾಹಿತಿಗಳು ವಹಿಸಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಮ್ಮ ಹಾಗೂ ವೇದಿಕೆಯ ಕಳೆದ 10 ವರ್ಷಗಳ ಒಡನಾಟವನ್ನು ಸ್ಮರಿಸಿದರು.

    ಪುಸ್ತಕ ಲೋಕಾರ್ಪಣೆ ಮಾಡಿದ ನಿವೃತ್ತಿ ಶಿಕ್ಷಕರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಖ್ಯಾತ ಮಕ್ಕಳ ಸಾಹಿತಿಗಳಾದ ಶ್ರೀ ತಮ್ಮಣ್ಣ ಬೀಗಾರ ಸಿದ್ದಾಪುರ ಮಾತನಾಡಿ ಪುಸ್ತಕದಲ್ಲಿನ ಮಕ್ಕಳ ಕವಿತೆಗಳ ಕುರಿತು ಪ್ರಶಂಸೆಯ ಮಾತಗಳನ್ನಾಡಿ ಕವಿ ಹೆಚ್. ಗಣೇಶರವರನ್ನು ಶ್ಲಾಘನೀಯ ಅಭಿನಂದಿಸಿದರು.

    ಅತಿಥಿಯಾಗಿ ಪ್ರೊ. ಜಿ. ಎ. ಹೆಗಡೆ ಸೋಂದಾ ಸಹಕಾರಿ ಧುರೀಣರಾದ ಶ್ರೀ ಎಸ್. ಎನ್. ಹೆಗಡೆ ದೊಡ್ನಳ್ಳಿ, ಸಮಾಜ ಸೇವಕ ಶ್ರೀ ಆರ್. ಜಿ. ಶೇಟ್ ಕಾನಸೂರು, ಪಿ.ಜಿ.ಎಸ್. ಪ್ರಾಂಶುಪಾಲರಾದ ರಾಜು ಕದಂ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಜೆ. ಆರ್. ಸಂತೋಷಕುಮಾರ ಉಂಚಳ್ಳಿ ಗ್ರಾ,ಪಂ. ನ ಸದಸ್ಯ ಹಾಗೂ ಕವಿ ಅರುಣಕೊಪ್ಪ, ದತ್ತಗುರು ಕಂಠಿ ಮುಂತಾದವರು ಉಪಸ್ಥಿತರಿದ್ದು ತಮ್ಮ ಅನಿಸಿಕೆ ಹಂಚಿಕೊಂಡರು. ನಂತರ ಜರುಗಿದ ಪುಸ್ತಕ ಪರಿಚಯ ಮಾಡಿದ ಶ್ರೀ ರಮೇಶ ಹೆಗಡೆ ಕೆರೆಕೋಣ ತುಂಬಾ ಸೋಗಸಾಗಿ ಕವಿ ಹೆಚ. ಗಣೇಶರವರ 4 ನೇ ಕೃತಿ “ರೆಕ್ಕೆಗಳಿದ್ದರೆ” ಕೃತಿಯನ್ನು ಪರಿಚಯಿಸಿ ಮೆಚ್ಚುಗೆಗೆ ಪಾತ್ರರಾದರು.

    ನಂತರ “ಅಪ್ಪು ಅಮರ” ಕಾರ್ಯಕ್ರಮದ ನುಡಿನಮನದಲ್ಲಿ ಕವಿ ಅರುಣಕೊಪ್ಪ ತಮ್ಮ ನುಡಿ ನಮನ ಸಲ್ಲಿಸಿದರು.
    ಹೆಚ್ ಗಣೇಶರವರು ರಾಜಕುಮಾರ ಹಾಗೂ ಪುನೀತ ರಾಜಕುಮಾರರವರ ನಡುವಿನ ಕಳೆದ 16 ವರ್ಷಗಳ ಒಡನಾಟವನ್ನು ಹಂಚಿಕೊಂಡು ಭಾವುಕರಾಗಿ ಅಪ್ಪುರವರಿಗೆ ಅಶ್ರುತರ್ಪಣದ ನುಡಿ ನಮನ ಸಲ್ಲಿದರು.

    ನಂತರದಲ್ಲಿ ವೇದಿಕೆಯಲ್ಲಿ 11 ಜನರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು 08 ಜನ ಸಾಧಕರನ್ನು ಅದ್ದೂರಿಯಾಗಿ ಸನ್ಮಾನಿಸಿ ಪುಷ್ಪ ಮಳೆಯನ್ನು ಸುರಿಸಲಾಯಿತು. ಹೆಚ್ ಗಣೇಶರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿ ಕನ್ನಡ ಶಾಲುಗಳನ್ನು ನೀಡಿ ಸನ್ಮಾನಿಸಿದರು.

    ನಂತರದಲ್ಲಿ ಅಪ್ಪು ಅಮರ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್ ರಾಜಕುಮಾರ ಅಭಿನಯದ ಗೀತೆಗಳನ್ನು ಹಾಗೂ ಕನ್ನಡ ಗೀತೆಗಳನ್ನು ಹಾಡಲಾಯಿತು. ಹಾಗೂ ನೃತ್ಯ ಕಾರ್ಯಕ್ರಮಗಳಳು ಜರುಗಿದವು. ಪುನೀತ್ ರಾಜಕುಮಾರ ಅಭಿನಯದ ಚಲನ ಚಿತ್ರ ಗೀತೆಗಳ ನೃತ್ಯವನ್ನು ಶಿರಸಿಯ ‘’ನಾಟ್ಯಂ ನೃತ್ಯಂ’’ ತಂಡದವರು ಪ್ರಸ್ತುತ ಪಡಿಸಿ ಸೇರಿದ ಜನರ ಮನಸೋರೆಗೊಂಡರು. ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪ್ಪುರವರಿಗೆ ಗೀತ ನಮನ ಸಲ್ಲಿಸಿದ ಎಲ್ಲ ಹಾಡುಗಾರರಿಗೆ ವೇದಿಕೆಯ ಪರವಾಗಿ ಅಭಿನಂದನಾ ಪತ್ರ ಹಾಗೂ ಪುಸ್ತಕಗಳನ್ನು ನೀಡಲಾಯಿತು.

    ಬೆಳ್ಳಿಗ್ಗೆ ರಕ್ತದಾನ ಶಿಬಿರ ಹಾಗೂ ನೇತ್ರದಾನ ನೊಂದಣಿ ಶಿಬಿರದಲ್ಲಿ ಭಾಗವಹಿಸಿದ ದಾನಿಗಳ ಆಕರ್ಷಕ ಪ್ರಮಾಣ ಪತ್ರ ನೀಡಲಾಯಿತು.
    ಕೊನೆಯಲ್ಲಿ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಪ್ರೋತ್ಸಾಹ ನೀಡಿದ ಸರ್ವರನ್ನು ವೇದಿಕೆಯ ಅಧ್ಯಕ್ಷರಾದ ಹೆಚ್. ಗಣೇಶ ಸ್ಮರಿಸಿ ವಂದಿಸಿದರು. ಸಹಕಾರ ನೀಡಿದವರ ಹೆಸರನ್ನು ಸ್ಮರಿಸಿ ಎಲ್ಲರಿಗೂ ಮತ್ತೊಮ್ಮೆ ವಂದಿಸಿದರು.

    ಕಾರ್ಯಕ್ರಮವು ಕೋವಿಡ್-19 ನಿಯಮಾವಳಿಯಂತೆ ಸ್ಯಾನಿಟೈಸರ್ ಹಾಗೂ ಮಾಸ್ಕ ಸೂಕ್ತ ಸಾಮಾಜಿಕ ಅಂತರದೊಂದಿಗೆ ನಡೆದು ಜನರ ಪ್ರಶಂಸೆಗೆ ಪಾತ್ರವಾಯಿತು.ಕಾರ್ಯಕ್ರಮ ನಡೆದ ಆವರಣದಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ಸಂದೇಶಗಳ ಬ್ಯಾನರ್‍ಗಳು ಜನಮನ ಹಾಗೂ ಗಣ್ಯರ ಗಮ ಸೆಳೆದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಕ್ತದಾನ, ನೇತ್ರದಾನ, ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಅನ್ನದ ಮಹತ್ವ, ಹಳೆಯ ಬಟ್ಟೆಗಳ ವಿಲೇವಾರಿ, ಕಪಡಾ ಬ್ಯಾಂಕ್’’ ಹಳೆ ಮತ್ತು ಹೊಸ ಪುಸ್ತಕಗಳ ನಿರ್ವಹಣೆ ಃooಞ ಃಚಿಟಿಞ ಹೀಗೆ ಉತ್ತಮ ಸಂದೇಶ ಅಲ್ಲಿ ಹಾಕಿದ ಬ್ಯಾನರ್‍ಗಳು ಬಿತ್ತರಿಸಿದವು. ಕಾರ್ಯಕ್ರಮ ಯಶಸ್ವಿಯಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top