• Slide
  Slide
  Slide
  previous arrow
  next arrow
 • ನೆಮ್ಮದಿ ಕುಠೀರದಲ್ಲಿ ಅರ್ಥಪೂರ್ಣವಾಗಿ ನಡೆದ ಶೃದ್ಧಾಂಜಲಿ ತಾಳಮದ್ದಳೆ

  300x250 AD

  ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಶಿರಸಿ ಮತ್ತು ಯಕ್ಷಗೆಜ್ಜೆ(ರಿ) ಇವರ ಸಹಯೋಗದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ಹಾಗೂ ಯಕ್ಷಗಾನ ಅಭಿಮಾನಿಯಾಗಿದ್ದ ಶಿರಸಿ ನಡಗೋಡಿನ ಜಿ ಮಹಾಬಲೇಶ್ವರ ಭಟ್ಟರವರಿಗೆ ಅವರ ಅಭಿಮಾನಿಗಳು ನಗರದ ನೆಮ್ಮದಿ ಕುಠೀರದಲ್ಲಿ ಶೃದಾಂಜಲಿ ಸಭೆಯನ್ನು ಅರ್ಥಪೂರ್ಣವಾಗಿ ನಡೆಸಿದರು.

  ಸಭೆಯಲ್ಲಿ ವಿ. ಉಮಾಕಾಂತ ಭಟ್ಟ ಕೆರೆಕೈ ಅಗಲಿದ ಚೇತನಕ್ಕೆ ನಮನ ಸಲ್ಲಿಸುತ್ತ ಅವರ ಸಾಹಿತ್ಯ ಹಾಗೂ ಯಕ್ಷಗಾನ ಅಭಿಮಾನದ ಕುರಿತಾಗಿ ವಿವರಿಸುತ್ತ ಜಿ. ಮಹಾಬಲೇಶ್ವರ ಭಟ್ಟ ರವರ ದಿವ್ಯಾತ್ಮಕ್ಕೆ ಶಾಂತಿಯನ್ನು ಪ್ರಾರ್ಥಿಸಿದರು.

  ಇದೇ ಸಂದರ್ಭದಲ್ಲಿ ಚಿಂತಕ ವಿ.ಪಿ.ಹೆಗಡೆ ವೈಶಾಲಿ, ಪತ್ರಕರ್ತ ಗಿರಿಧರ ಕಬ್ನಳ್ಳಿ , ಯಕ್ಷಗೆಜ್ಜೆಯ ನಿರ್ಮಲಾ ಗೋಳಿಕೊಪ್ಪ ,ಜ್ಯೋತಿ ಚಂದ್ರಶೇಖರ, ಸಂಧ್ಯಾ ಅಜೇಯ ಮತ್ತಿತರರು ಪಾಲ್ಗೊಂಡು ಅರ್ಥಪೂರ್ಣವಾಗಿಸಿದರು.

  ತದನಂತರದಲ್ಲಿ ಅಗಲಿದ ನಡಗೋಡ ಭಟ್ಟರ ಅತ್ಯಂತ ಪ್ರೀತಿಯ ಪ್ರಸಂಗವಾಗಿದ್ದ ಶರಸೇತು ಬಂಧನ ತಾಳಮದ್ದಳೆಯನ್ನು ನಡೆಸಲಾಯಿತು.

  300x250 AD

  ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಾಗವತ ತುಳಗೇರಿ,ಮದ್ದಳೆಯಲ್ಲಿ ಶಂಕರ ಭಾವಗತ ಯಲ್ಲಾಪುರ ಪಾಲ್ಗೊಂಡರೆ ಮುಮ್ಮೇಳದ ಪಾತ್ರಗಳಾದ ಹನುಮಂತನಾಗಿ ನಿರ್ಮಲಾ ಹೆಗಡೆ ಗೋಳಿಕೊಪ್ಪ,ಅರ್ಜುನನಾಗಿ ವರ್ಗಾಸರ ಗಣಪತಿ ಭಟ್ಟ, ಕೃಷ್ಣನಾಗಿ ಕರಸುಳ್ಳಿ ಬಾಲಚಂದ್ರ ಭಟ್ಟ ಪಾಲ್ಗೊಂಡರು.

  ಸಾಹಿತ್ಯ ಪರಿಷತ್ತಿನ ಕೃಷ್ಣ ಪದಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಭಂಡಾರಿ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top