• Slide
    Slide
    Slide
    previous arrow
    next arrow
  • ದೇವಸ್ಥಾನದ ವ್ಯವಸ್ಥಾ ಸಮಿತಿ ರಚಿಸಲು ಸೂಚನೆ ಹೊರಡಿಸಿದ ಇಲಾಖೆ

    300x250 AD

    ಭಟ್ಕಳ: ತಾಲೂಕಿನ ಎರಡು ಪ್ರಸಿದ್ಧ ದೇವಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಸರಕಾರದ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

    ರಾಜ್ಯದಲ್ಲಿ ಒಟ್ಟೂ 39 ಎ ಪ್ರವರ್ಗದ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಲಾಗಿದ್ದು ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚನೆಗೂ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

    300x250 AD

    ದೇವಾಯದ ಪ್ರಧಾನ ಅರ್ಚಕ ಇಲ್ಲವೇ ಅರ್ಚಕ, ಅನುಸೂಚಿತ ಜಾತಿ/ ಬುಡಕಟ್ಟಿಗೆ ಸೇರಿದ ಓರ್ವ ಸದಸ್ಯ, ಇಬ್ಬರು ಮಹಿಳಾ ಸದಸ್ಯರು, ಉಳಿದವರು 25 ವರ್ಷ ಮೇಲ್ಪಟ್ಟ ದೇವರಲ್ಲಿ ನಂಬಿಕೆಯುಳ್ಳ, ಯಾವುದೇ ಅನರ್ಹತೆಯನ್ನು ಹೊಂದಿರದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದೂ ತಿಳಿಸಲಾಗಿದೆ. ಅರ್ಜಿಗಳನ್ನು ಪ್ರಕಟಣೆಯ ದಿನಾಂಕ ಜ. 17ರಿಂದ 15 ದಿನಗಳ ಒಳಗಾಗಿ ನಿಯಮಿತ ನಮೂನೆಯಲ್ಲಿ ಕಳುಹಿಸಲು ಕೋರಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top