• Slide
    Slide
    Slide
    previous arrow
    next arrow
  • ಮಳೆಗಾಲ ಮುಗಿದರೂ ಮರಳು ತೆಗೆಯಲು ಅನುಮತಿ ನೀಡದ ಜಿಲ್ಲಾಡಳಿತ: ಗುತ್ತಿಗೆದಾರರ ಆಕ್ರೋಶ

    300x250 AD

    ಶಿರಸಿ: ಮಳೆಗಾಲ ಮುಗಿದರೂ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡದಿರುವುದನ್ನು ಗಮನಿಸಿದರೆ ಜಿಲ್ಲಾಡಳಿತಕ್ಕೆ ಕೊರೊನಾ ತಗಲಿರುವಂತೆ ಕಂಡು ಬರುತ್ತಿದೆ.ಮಳೆಗಾಲ ಮುಗಿದು ಮೂರು ತಿಂಗಳಾದರೂ ಮರಳು ತೆಗೆಯಲು ಅನುಮತಿ ನೀಡದೆ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಶಿರಸಿ ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘ ಗಂಭೀರವಾಗಿ ಆರೋಪಿಸಿದೆ.

    ಕಳೆದ ಜೂನ್ ತಿಂಗಳಲ್ಲಿ ಮರಳು ತೆಗೆಯುವುದನ್ನು ನಿಲ್ಲಿಸಲಾಗಿತ್ತು. ಸಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಮರಳು ತೆಗೆಯಲು ಅನುಮತಿ ನೀಡುವ ನಿರೀಕ್ಷೆ ಇತ್ತು. ಆದರೆ, ಜನವರಿ ಮುಗಿಯುತ್ತ ಬಂದರೂ ಇನ್ನೂ ಆ ಬಗ್ಗೆ ನಿರ್ದಿಷ್ಟ ಕ್ರಮಕೈಗೊಳ್ಳದೆ ಜಿಲ್ಲಾಡಳಿತ ಜಿಲ್ಲಾ ಅಭಿವೃದ್ಧಿಗೆ ವಂಚಿಸುತ್ತಿದೆ ಎನಿಸುತ್ತಿದೆ. ಮರಳು ತೆಗೆಯುವ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮರೆತಂತೆ ಕಾಣುತ್ತಿದ್ದು ಬೇಸರ ತರಿಸುತ್ತಿದೆ. ಈ ವರ್ಷ ಹೆಚ್ಚಿನ ಮಳೆಯಾಗಿರುವುದರಿಂದ ನದಿಗಳಲ್ಲಿ ಮರಳಿನ ಕೊರತೆ ಇಲ್ಲ. ಗುತ್ತಿಗೆದಾರರೊಬ್ಬರು ಶರಾವತಿ ನದಿಯಲ್ಲಿ ಬ್ರಿಜ್ ಮಾಡಲು ಅಡಿಪಾಯಕ್ಕೆ ತೆಗೆಯಲು ಹೋದಾಗ 15 ಮೀಟರ್ ಆಳದವರೆಗೆ ಮರಳು ಇರುವುದು ಕಂಡು ಬಂದಿದೆ. ಕರಾವಳಿ ಭಾಗದಲ್ಲಿ ಕೆಲವು ಅಧಿಕಾರಿಗಳನ್ನು ತೃಪ್ತಿಪಡಿಸಿ ಅನದೀಕೃತ ಮರಳು ತೆಗೆದು ಸಣ್ಣ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದು, ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ.

    300x250 AD

    ಜಿಲ್ಲೆಯಲ್ಲಿ ಸರಕಾರಿ ಕಾಮಗಾರಿಗಳಿಗೆ, ಸಾರ್ವಜನಿಕರಿಗೆ, ಸಂಘ-ಸAಸ್ಥೆಗಳ ಕಟ್ಟಡಗಳಿಗೆ ಮರಳು ಸಿಗಲು ಇನ್ನೂ ಪ್ರಯತ್ನಿಸದಿರುವುವು ಹಾಗೂ ನಿರ್ದಿಷ್ಟ ಸೂಚನೆ ನೀಡಿ ಮರಳು ತೆಗೆಯಲು ಮತ್ತು ಸಾಗಾಟಕ್ಕೆ ಅನುಮತಿ ನೀಡಲು ಕ್ರಮವಾಗದಿರುವುದು ಬೇಸರ ತಂದಿದೆ. ಆದ್ದರಿಂದ ಜಿಲ್ಲೆಯ ಎಲ್ಲ ನದಿಗಳಲ್ಲಿ ಮರಳು ತೆಗೆಯಲು ಮತ್ತು ಸಾಗಾಟಕ್ಕೆ ಕೂಡಲೇ ಪರವಾನಿಗೆ ನೀಡಲು ಜಿಲ್ಲಾ ಗುತ್ತಿಗೆದಾರರ ಸಂಘ ಆಗ್ರಹಿಸಿದೆ

    Share This
    300x250 AD
    300x250 AD
    300x250 AD
    Leaderboard Ad
    Back to top