ಯಲ್ಲಾಪುರ: ಯುವ ಮೋರ್ಚಾ ಯಲ್ಲಾಪುರ ಹಾಗೂ ಗ್ರಾಮದೇವಿ ಸ್ಪೋರ್ಟ್ಸ್ ಕ್ಲಬ್ ಕಿರವತ್ತಿ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ “ಕಮಲ ಟ್ರೋಫಿ” ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ವಿವೇಕ್ ಹೆಬ್ಬಾರ್ ಸೆಮಿಫೈನಲ್ಸ್ ಪಂದ್ಯಾವಳಿಗೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕವಾಗಿ ಚಾಲನೆ ನೀಡಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ರವಿ ಭಟ್ ಬರಗದ್ದೆ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ್, ಮಾಧ್ಯಮ ಪ್ರಮುಖ ಸುನೀಲ್ ಕಾಂಬ್ಳೆ, ಪ್ರಮುಖ ಎಮ್.ಎನ್.ಭಟ್, ಗಣೇಶ ಹೆಗಡೆ, ನರಸಿಂಹ ಕಿರಗಾರೆ, ಸುಜಯ ಮರಾಠಿ ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.