• Slide
    Slide
    Slide
    previous arrow
    next arrow
  • ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹೊಸ ಕಟ್ಟಡಕ್ಕೆ ಭಾರತೀಯ ವಿದ್ವಾಂಸರ ಹೆಸರು

    300x250 AD

    ನವದೆಹಲಿ:  ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಬಲ್ಲಿಯೋಲ್ ಕಾಲೇಜಿನ ಹೊಸ ಕಟ್ಟಡಕ್ಕೆ ಭಾರತೀಯ ವಿದ್ವಾಂಸ ಡಾ ಲಕ್ಷ್ಮಣ್ ಸರೂಪ್ ಅವರ ಹೆಸರನ್ನು ಇಡುವುದಾಗಿ ಘೋಷಿಸಿದ್ದು, ಇದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.

    ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಸರೂಪ್ (1894-1946) ಆಕ್ಸ್‌ಫರ್ಡ್‌ನಲ್ಲಿ DPhil ಪದವಿಗಾಗಿ ಅರ್ಜಿ ಸಲ್ಲಿಸಿದ ಮೊದಲ ವಿದ್ಯಾರ್ಥಿ. 1919 ರಲ್ಲಿ ಅವರಿಗೆ ಯೆತಿಮೋಲಾಜಿ ಮೇಲಿನ ಅತ್ಯಂತ ಹಳೆಯ ಸಂಸ್ಕೃತ ಗ್ರಂಥವಾದ ಯಾಸ್ಕನ ನಿರುಕ್ತದ ವಿಷಯದ ಮೇಲೆ ಪದವಿಯನ್ನು ನೀಡಲಾಯಿತು.

    “ಮಾಸ್ಟರ್ಸ್ ಫೀಲ್ಡ್‌ನಲ್ಲಿರುವ ಬಲ್ಲಿಯೋಲ್‌ನ ಹೊಸ ಕಟ್ಟಡಗಳಿಗೆ ಬಲ್ಲಿಯೋಲ್ ಹಳೆಯ ವಿದ್ಯಾರ್ಥಿ ಮತ್ತು ವೈವಿಧ್ಯತೆ, ಮೌಲ್ಯಗಳನ್ನು ಪ್ರತಿಬಿಂಬಿಸುವ ಶಿಕ್ಷಣತಜ್ಞರ ಹೆಸರನ್ನು ಇಡಲಾಗಿದೆ.  ಕಾಲೇಜಿನ ಇತಿಹಾಸ, ಬ್ಲಾಕ್ C1 ಗೆ ಡಾ ಲಕ್ಷ್ಮಣ್ ಸರೂಪ್ (ಬಲ್ಲಿಯೋಲ್ 1916) ಅವರ ಹೆಸರನ್ನು ಇಡಲಾಗಿದೆ” ಎಂದು ಬಲ್ಲಿಯೋಲ್ ಕಾಲೇಜಿನ ಹೇಳಿಕೆ ತಿಳಿಸಿದೆ.

    300x250 AD

    “ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು 1917 ರಲ್ಲಿ ಬ್ರಿಟನ್‌ನಲ್ಲಿ DPhil ಅನ್ನು ಮೊದಲ ಡಾಕ್ಟರೇಟ್ ಪದವಿಯಾಗಿ ಪರಿಚಯಿಸಿತು, ಜರ್ಮನಿಯಲ್ಲಿ ಪರಿಚಯಿಸಲಾದ ಸಂಶೋಧನಾ ಪದವಿಗಳಿಂದ ಇದು ಸ್ಫೂರ್ತಿ ಪಡೆದಿತ್ತು. ಆಕ್ಸ್‌ಫರ್ಡ್ ಪದವಿಗೆ ಮೊದಲು ದಾಖಲಾದ ಇಬ್ಬರು ವಿದ್ಯಾರ್ಥಿಗಳಲ್ಲಿ ಲಕ್ಷ್ಮಣ್ ಸರೂಪ್ ಒಬ್ಬರು, ಇನ್ನೊಬ್ಬರು ನ್ಯೂಜಿಲೆಂಡ್‌ನ ಜೇಮ್ಸ್ ಗ್ಯಾಟೆನ್‌ಬೈ” ಎಂದು ಹೇಳಿದೆ.

    ವಿಶ್ವವಿದ್ಯಾನಿಲಯದ ಮಾಹಿತಿಯ ಪ್ರಕಾರ, ಸರೂಪ್ 1894 ರಲ್ಲಿ ಲಾಹೋರ್‌ನಲ್ಲಿ (ಮೊದಲು ಭಾರತದ ಒಂದು ಭಾಗ, ಈಗ ಪಾಕಿಸ್ತಾನದಲ್ಲಿದೆ) ಜನಿಸಿದರು. ಅವರು ಲಾಹೋರ್‌ನ ಓರಿಯೆಂಟಲ್ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಮುಗಿಸಿದ ನಂತರ 1916 ರಲ್ಲಿ ಭಾರತೀಯ ರಾಜ್ಯ ವಿದ್ಯಾರ್ಥಿವೇತನದ ಮೇಲೆ ಬಲ್ಲಿಯೋಲ್ ಕಾಲೇಜಿಗೆ ಸೇರಿದರು. ಬಲ್ಲಿಯೋಲ್‌ನಲ್ಲಿದ್ದಾಗ, ಸರೂಪ್ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದ ನಾಯಕರಾಗಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top