ಅಂಕೋಲಾ: ಜಿಲ್ಲೆಯಲ್ಲಿಂದು ಕೊರೊನಾ ಸ್ಫೋಟಗೊಂಡಿದ್ದು, ಜನರಿಗೆ ಆತಂಕ ಹೆಚ್ಚಿದೆ.ಕೊರೊನಾ ಪಾಸಿಟಿವ್ ಸಂಖ್ಯೆ ಒಂದೇ ಸಮನೆ ಐದು ನೂರರ ಗಡಿ ದಾಟಿದ್ದು, ಒಟ್ಟೂ 525 ಕೇಸ್ ವರದಿಯಾಗಿದೆ. 208 ಮಂದಿ ಗುಣಮುಖರಾಗಿದ್ದಾರೆ.
ಇಂದು ಕಾರವಾರದಲ್ಲಿ ಅತೀ ಹೆಚ್ಚು 158 ಕೇಸ್, ಅಂಕೋಲಾ 68, ಕುಮಟಾ 36, ಹೊನ್ನಾವರ 73, ಭಟ್ಕಳ 33, ಶಿರಸಿ 20, ಯಲ್ಲಾಪುರ 17, ಮುಂಡಗೋಡ 15, ಹಳಿಯಾಳದಲ್ಲಿ 54, ಜೋಯಿಡಾದಲ್ಲಿ 10 ಕೇಸ್ ದೃಢಪಟ್ಟಿದೆ.
ಈವರೆಗೆ ಜಿಲ್ಲೆಯಲ್ಲಿ 794 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ಸದ್ಯ 2036 ಕೇಸ್ ಸಕ್ರಿಯವಾಗಿದೆ. ಇಂದು 208 ಮಂದಿ ಗುಣಮುಖರಾಗಿದ್ದಾರೆ.