ಯಲ್ಲಾಪುರ: ವರ್ಷಕ್ಕೋಂದಾವರ್ತಿ ಬರುವ ಚೌತಿಗೂ ರಸ್ತೆ ಬದಿ ನಾಮ ಫಲಕವೇ ಎಂದು ಹುಬ್ಬೇರಿಸಬೇಡಿ.! ಇದು ರಾಜ್ಯ ಹೆದ್ದಾರಿ ಇಲಾಖೆಯ ಎಡವಟ್ಟಿನಿಂದಾಗಿ ಹೀಗಾಗಿದೆ.
ಯಲ್ಲಾಪುರ ಶಿರಸಿ ರಾಜ್ಯಹೆದ್ದಾರಿ ೯೩ ಪಕ್ಕ ಯಲ್ಲಾಪುರ ತಾಲೂಕಿನ ಚವತ್ತಿ ಎಂಬ ಊರು ಸಿಗುತ್ತದೆ.ಇದನ್ನು ಇಂಗ್ಲೀಷನಲ್ಲಿ ಸರಿಯಾಗಿ ಬರೆದಿದ್ದು, ಆದರೆ ಕನ್ನಡದ ಬರಹದಲ್ಲಿ ಚವತ್ತಿ ಆಗಬೇಕಾದಲ್ಲಿ “ಚೌತಿ”ಎಂದು ಬರೆಯಲಾಗಿದೆ.ಇದು ದಾರಿ ಹೋಕರಿಗೆ ವಿಡಂಬನೆಯಾಗಿದೆ.