ಶಿರಸಿ:ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ , ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ ಉ.ಕ. ಶಿರಸಿ ಹಾಗೂ ಧಾರವಾಡ,ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಜೇನು ಕೃಷಿ ತರಬೇತಿಯು ಜ.19 ರಿಂದ ಜ.25 ರ ವರೆಗೆ ಶಿರಸಿಯ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಜ.20 ರ ಬೆಳಿಗ್ಗೆ 10.30 ಕ್ಕೆ ಹುಳಗೋಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಭೈರುಂಬೆಯಲ್ಲಿ ನಡೆಯಲಿದೆ.
ಕಾರ್ಯಕ್ರಮ ಉದ್ಘಾಟಕರಾಗಿ ಅಧ್ಯಕ್ಷರು ಧಾರವಾಡ,ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿ., ಧಾರವಾಡದ ಶಂಕರ ವಿ ಮುಗದ , ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು ಧಾರವಾಡ, ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಗೂ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘ ನಿ., ಧಾರವಾಡದ ಸುರೇಶ್ಚಂದ್ರ ಹೆಗಡೆ, ನಿರ್ದೇಶಕ ಶಂಕರ ಪಿ ಹೆಗಡೆ, ಪರಶುರಾಮ ವಿ ನಾಯ್ಕ,ವ್ಯವಸ್ಥಾಪಕ ಕೆ ಎಂ ಲೋಹಿತೇಶ್ವರ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಶಿರಸಿಯ ಮಂಜು ಎಂ ಜೆ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಹಿರಿಯ ವ್ಯವಸ್ಥಾಪಕಿ ಲತಾ ಎಸ್, ವ್ಯವಸ್ಥಾಪಕರು ಧಾರವಾಡ, ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿ., ಧಾರವಾಡದ ಡಾ. ವೀರೇಶ ತರಲಿ, ಅಧ್ಯಕ್ಷರು ಹುಳಗೋಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಭೈರುಂಬೆಯ ವಿ ಎಸ್ ಹೆಗಡೆ ಕೆಶಿನ್ಮನೆ, ವಿಜ್ಞಾನಿಗಳು, ಕೀಟ ಶಾಸ್ತ್ರ ವಿಭಾಗ ಕೃಷಿ ವಿಜ್ಞಾನ ಕೇಂದ್ರ ಶಿರಸಿಯ ರೂಪಾ ಎಸ್ ಪಾಟೀಲ್ ಆಗಮಿಸಲಿದ್ದಾರೆ.