ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಪಿ.ಡಬ್ಲು.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.20 ಗುರುವಾರ ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆವರೆಗೆ ಪಟ್ಟಣ ಶಾಖೆಯ ಕಸ್ತೂರಬಾ ನಗರ 11 ಕೆ.ವಿ ಮಾರ್ಗದ ಮರಾಠಿಕೊಪ್ಪ, ಲಯನ್ಸ್‍ನಗರ, ಗುರುನಗರ, ಕೊಪ್ಪಳ ಕಾಲೋನಿ, ಪ್ರಗತಿ ನಗರ, ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಕಾಲೇಜು ರಸ್ತೆ ಪ್ರದೇಶಗಳಲ್ಲಿ, ಗ್ರಾಮೀಣ-1 ಶಾಖೆಯ ತಾರಗೋಡ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, ಬನವಾಸಿ ಶಾಖೆಯ ಬನವಾಸಿ ಮತ್ತು ಸುಗಾವಿ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.