ಶಿರಸಿ : ಮನೆಯಲ್ಲಿದ್ದ ವಿದ್ಯುತ್ ವಾಯರ್ ತಗುಲಿ ವ್ಯಕ್ತಿ ಮೃತಪಟ್ಟ ಘಟನೆ ಶಿರಸಿಯ ಮಾರಿಕಾಂಬಾ ನಗರದ ಬಳಿ ನಡೆದಿದೆ.
25 ವರ್ಷದ ಹಾಲಪ್ಪ ಮೂಕಪ್ಪ ಲಾವಣಿ ಮನೆಯಲ್ಲಿ ಜೋತು ಬಿದ್ದಿದ್ದ ವಿದ್ಯುತ್ ವಾಯರ್ ಸರಿಪಡಿಸುತ್ತಿದ್ದ ವೇಳೆ ಕರೆಂಟ್ ತಗುಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬಂದ ಅಂಬುಲೆನ್ಸ್ ವಾಹನದ ಪ್ರದೀಪ್ ಹಾಗೂ ನಿರಂಜನ್ ತುರ್ತು ಸೇವೆ ನೀಡಿದ್ದು, ಅದಕ್ಕೆ ಸ್ಪಂದಿಸದ ಹಾಲಪ್ಪ ನಿಧನರಾಗಿದ್ದಾರೆ.