• Slide
    Slide
    Slide
    previous arrow
    next arrow
  • ಪ್ರಸಕ್ತ ಹಣಕಾಸು ವರ್ಷದಲ್ಲಿ $ 650 ಬಿಲಿಯನ್ ರಫ್ತು ಸಾಧನೆಯ ಗುರಿ; ಗೋಯಲ್

    300x250 AD

    ನವದೆಹಲಿ:  ಪ್ರಸಕ್ತ ಹಣಕಾಸು ವರ್ಷದಲ್ಲಿ $ 650 ಬಿಲಿಯನ್ ರಫ್ತು ಸಾಧಿಸುವ ಗುರಿ ಇಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

    ಎಲ್ಲಾ ಪ್ರಮುಖ ರಫ್ತು ಉತ್ತೇಜನಾ ಮಂಡಳಿಗಳ (EPCs) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋಯಲ್, $400 ಬಿಲಿಯನ್‌ನಷ್ಟು ಸರಕು ರಫ್ತು ಗುರಿಯನ್ನು ಇಡಲಾಗಿದೆ ಮತ್ತು ಸೇವಾ ವಲಯವು $250 ಬಿಲಿಯನ್ ರಫ್ತು ಸಾಧಿಸಲು ಶ್ರಮಿಸಬೇಕಿದೆ ಎಂದು ಹೇಳಿದ್ದಾರೆ.

    ಪ್ರಸಕ್ತ ಎಪ್ರಿಲ್-ಡಿಸೆಂಬರ್ 2021ರ ಮೊದಲ ಒಂಬತ್ತು ತಿಂಗಳಲ್ಲಿ ಭಾರತವು $ 300 ಬಿಲಿಯನ್ ಮರ್ಚಂಡೈಸ್ ರಫ್ತುಗಳನ್ನು ಸಾಧಿಸಿದೆ ಎಂದು  ತೃಪ್ತಿ ವ್ಯಕ್ತಪಡಿಸಿದ ಗೋಯಲ್, ರಫ್ತು ಉತ್ತೇಜನಾ ಮಂಡಳಿಗಳನ್ನು ಹ್ಯಾಂಡ್‌ಹೋಲ್ಡ್ ಮಾಡಲು ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ರಫ್ತು ಗುರಿಗಳನ್ನು ಸಾಧಿಸಲು ತಮ್ಮ ಸಚಿವಾಲಯವು ಎಲ್ಲಾ ಅಗತ್ಯ ನೆರವನ್ನು ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.

    300x250 AD

    ಈ ಹಣಕಾಸು ವರ್ಷದ  ಕೊನೆಯ ತ್ರೈಮಾಸಿಕದಲ್ಲಿ ಹೆಚ್ಚಿನ ಸರಕು ರಫ್ತು ಗುರಿಯನ್ನು ನಿಗದಿಪಡಿಸಬಹುದು ಎಂದು ಗೋಯಲ್ ಹೇಳಿದರು.

    “ಓಮಿಕ್ರಾನ್ ಭಯದ ನಡುವೆಯೂ ಡಿಸೆಂಬರ್‌ನಲ್ಲಿ ಮಾ ನಾವು $ 37 ಬಿಲಿಯನ್ ಸರಕು ರಫ್ತುಗಳನ್ನು ಮುಟ್ಟಿದ್ದೇವೆ. ಈ ತಿಂಗಳು, ಜನವರಿ 15 ರವರೆಗೆ 15 ದಿನಗಳಲ್ಲಿ, ನಾವು $ 16 ಬಿಲಿಯನ್ ತಲುಪಿದ್ದೇವೆ ಎಂದು ಗೋಯಲ್ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top