ಯಲ್ಲಾಪುರ: ಈ ಪೆÇೀರನಿಗೆ ಕೇವಲ 13 ವರ್ಷ ವಯಸ್ಸು. ಮನೆಯಲ್ಲಿ ದೊಡ್ಡವರು ಅಡಿಕೆ ಕೊನೆ ಕೊಯ್ಯುವ ವೇಳೆಯಲ್ಲಿ ಕಷ್ಟಪಡುವುದನ್ನು ನೋಡಲಾಗದೇ ಕೊನೆ ಗೌಡ ಮಾಡುವ ಕಾರ್ಯವನ್ನು ನಾನೇ ಮಾಡಿದರೆ ಹೇಗೆ ಎಂದು ತಿಳಿದು ಇನ್ನು ಬಳಪ, ಪೆನ್ನು ಹಿಡಿಯುವ ಈ ಬಾಲಕ ಹಿಡಿದಿದ್ದು ಮಾತ್ರ ಅಡಿಕೆ ಕೊಯ್ಯುವ ದೋಟಿಯನ್ನು. ಆತನೇ ಸಚೇತ ಹೆಗಡೆ.
ಇಂದು ಶಿರಸಿ, ಯಲ್ಲಾಪುರ ಹಾಗೂ ಸಿದ್ದಾಪುರ ಭಾಗದಲ್ಲಿ ಕೊನೆ ಗೌಡರ ಬರವನ್ನು ಕಾಣುತ್ತಿದ್ದೇವೆ. ಒಂದು ವೇಳೆ ಸಿಕ್ಕಿದರೂ ಅವರು ಹೇಳಿದಷ್ಟು ಅಂದರೆ ಒಂದೂವರೆ ಸಾವಿರಕ್ಕೂ ಹೆಚ್ಚಿನ ಹಣವನ್ನು ಒಂದು ದಿನಕ್ಕೆ ನೀಡಿ ಕರೆ ತರುವ ಪರಿಸ್ಥಿತಿ ಇದೆ. ಆದರೆ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಬಾಲಕ ಕೊನೆ ಗೌಡರಿಗೆ ಸವಾಲು ಒಡ್ಡಿ ತಾನೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.
ಯಲ್ಲಾಪುರ ತಾಲೂಕಿನ ಉಮ್ಮಚಗಿ ಜಾಜಿ ಮನೆಯ ಸಚೇತ ದಿವಸ್ಪತಿ ಹೆಗಡೆ. ಈತ 7ನೇ ತರಗತಿಯಲ್ಲಿ ಓದುತ್ತಿದ್ದು ಜಾಜಿಮನೆಯ ಜಾಜಿ ಮಾಸ್ತರ ಮೊಮ್ಮಗ. ತಂದೆ ದಿವಸ್ಪತಿ ಹೆಗಡೆ, ತಾಯಿ ಶ್ವೇತಾ ಹೆಗಡೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ತಮ್ಮ ತೋಟದಲ್ಲಿ ಅಡಿಕೆ ಕೊಯ್ಯುವ ವೇಳೆಯಲ್ಲಿ ತಾನು ಅಡಿಕೆ ಹಿಡಿಯುವ ಕಾಯಕಕ್ಕೆ ಹೋಗುತ್ತಿದ್ದ. ಅಡಿಕೆ ಕೊಯ್ಯುವ ಕೊನೆ ಗೌಡ ಕಾಯಕಕ್ಕೆ ಹೋಗುತ್ತಿದ್ದ. ಅಡಿಕೆ ಕೊಯ್ಯುವ ಕೊನೆಗೌಡ ಯಾವ ರೀತಿಯಾಗಿ ಕೊನೆ ಕೊಯ್ಯುತ್ತಾನೆ ಎಂಬುದನ್ನು ಕೂಲಕುಂಶವಾಗಿ ಗಮನಿಸುತ್ತಿದ್ದ.
ಕಳೆದ ಎರಡು ವರ್ಷಗಳಿಂದ ಕೊನೆ ಗೌಡನನ್ನು ಕರೆ ತರುವುದು ಬಹಳ ಕಷ್ಟಕರವಾಗಿತ್ತು. ಪ್ರತಿಯೊಂದನ್ನು ಬೇರೆಯವರಿಗೆ ಅವಲಂಬಿಸಿಕೊಂಡರೆ ನಮ್ಮಕಾರ್ಯ ಹಾಳಾಗುತ್ತದೆ ಎಂದು ತಿಳಿದ ಈ ಬಾಲಕ ಸ್ವತಃ ತಾನೇ ಮರ ಹತ್ತುವ ಕಾಯಕವನ್ನು ರೂಢಿಸಿಕೊಂಡು ಸಫಲನಾದ. ಪ್ರಬುದ್ಧ ಕೊನೆ ಗೌಡನಿಗೂ ಸರಿ ಸಾಟಿ ಅನ್ನುವಂತೆ ಉದ್ದದ ಅಡಿಕೆ ಮರವನ್ನು ಸರಸರನೇ ಏರುವ ಈತ ಸ್ವಲ್ಪವೂ ಅಂಜಿಕೆಯಿಲ್ಲದೇ ಅಡಿಕೆ ಕೊನೆಗಳನ್ನು ಕೊಯ್ಯುತ್ತಿದ್ದಾನೆ. ಇದೀಗ ಈ ಬಾಲಕ ನಮ್ಮೆದುರಿಗೆ ದುಸ್ಸಾಹಸ ಮಾಡುತ್ತಿದ್ದಾನೆ ಅಂತ ಅಂದುಕೊಂಡರೂ, ನಮ್ಮ ಕೆಲಸವನ್ನು ಯಾರಿಗೂ ಕಾಯದೇ ನಾವೇ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಇಂತಹ ಬಾಲಕನ ಈ ಸಾಧನೆ ಇಂದಿನ ಯುವ ಜನತೆಗೆ ಮಾದರಿಯಾಗಲೇ ಬೇಕಾಗಿದೆ.