
ಕಾರವಾರ: ನಗರದ ಕೋಡಿಭಾಗದ ಸಾಗರದರ್ಶನ ಹಾಲ್ ಬಳಿ ಗಾಂಜಾ ಮಾರಾಟ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಖಚಿತ ಮಾಹಿತಿ ಮೇರೆಗೆ ಕಾರವಾರ ನಗರ ಪೋಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾರವಾರದ ಸಂಕ್ರೀವಾಡದ ರಿಜ್ವಾನ್ ಶೇಮ್ ಹಾಗೂ ಹಬ್ಬುವಾಡದ ಸಾಹಿಲ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 3.20 ಲಕ್ಷ ಮೌಲ್ಯದ 3200ಕೆಜಿ ಗಾಂಜಾ ಹಾಗೂ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಮಹಾರಾಷ್ಟ್ರದ ಪುಣೆಯಿಂದ ಅಕ್ರಮವಾಗಿ ಗಾಂಜಾ ಸಾಗಿಸಿ ಕಾರವಾರದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರಠಾಣೆ ಪಿಎಸ್ಸೈ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿಗಳಾದ ರಾಜೇಶನಾಯಕ ಸತ್ಯಾನಂದ ನಾಯ್ಕ, ತುಕಾರಾಮ ಬಣಕಾರ ಹನುಮಂತ ರೆಡ್ಡರ್, ಮಹೇಶನಾಯ್ಕ, ನಾಮದೇವ ನಾಂದ್ರ, ಅರ್ಜುನ ದೇಸಾಯಿ, ಮಂಜುನಾಥ ಚಟಗಾರ ಇದ್ದರು.