ಹೊನ್ನಾವರ: ತಾಲೂಕಿನಲ್ಲಿ 244 ಮೀನುಗಾರಿಕಾ ದೋಣಿಗಳು ಅಡಿಗೆ ಅನಿಲ ದರ ದುಪ್ಪಟ್ಟಾಗಿರುವುದರಿಂದ ರಿಯಾಯತಿ ದರದಲ್ಲಿ ಸೀಮೆಎಣ್ಣೆ ಪಡೆಯಲು ನೋಂದಣಿಯಾಗಿವೆ. ಇದರಿಂದ ಜನ ಸಾಂಪ್ರದಾಯಿಕ ಇಂಧನಗಳತ್ತ ಮತ್ತೆ ಹೊರಳುತ್ತಿದ್ದಾರೆ ಪರಿಣಾಮ ಸೀಮೆಎಣ್ಣೆಗೆ ಬೇಡಿಕೆ ಹೆಚ್ಚಾಗುತ್ತಿದೆ.
ತಾಲೂಕಿನಲ್ಲಿ 25 ಸಾವಿರ ಬಿ. ಪಿ. ಎಲ್ ಹಾಗೂ 1,951 ಅಂತ್ಯೋದಯ ಕಾರ್ಡ್ದಾರರಿದ್ದು ಡಿಸೆಂಬರ್‌ನಲ್ಲಿ ತಾಲೂಕಿಗೆ 25 ಸಾವಿರ ಲೀಟರ್ ಸೀಮೆಎಣ್ಣೆ ಪೂರೈಕೆಯಾಗಿದೆ. ಮೊದಲೇ ಬೇಡಿಕೆ ಸಲ್ಲಿಸಿದ ಕಾರ್ಡ್ದಾರರಿಗೆ ತಲಾ ಒಂದು ಲೀಟರ್ ನೀಡಲಾಗಿದೆ ಎಂದು ಆಹಾರ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮಂಕಿ ಹಾಗೂ ಹೊನ್ನಾವರ ಪಟ್ಟಣಗಳ ಪಡಿತರ ಅಂಗಡಿಗಳಿಗೆ ಸೀಮೆಎಣ್ಣೆ ಪೂರೈಕೆ ಯಾಗುತ್ತಿಲ್ಲ. ಇದರಿಂದ ನಿಗದಿಯಂತೆ ಸೀಮೆಎಣ್ಣೆ ಸಿಗದೆ ಮೀನುಗಾರರು ತೊಂದರೆಗೀಡಾಗಿದ್ದಾರೆ.