
ಶಿರಸಿ: ಕೋವಿಡ್ ಸಾಂಕ್ರಾಮಿಕ ಅಲೆಯಿಂದ ಸ್ತಬ್ಧಗೊಂಡ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಪ್ರಮುಖವಾದದ್ದು. ಬದಲಾದ ಸನ್ನಿವೇಶಕ್ಕೆ ಸದಾ ತೆರೆದುಕೊಳ್ಳುವ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಕೋವಿಡ್ ಅಲೆಯಲ್ಲಿಯೂ ಕೆಲಸ ನಿಲ್ಲದಂತೆ ಮಾಡಲು ‘ವರ್ಕ್ ಫ಼್ರಾಂ ಹೋಮ್’ ವ್ಯವಸ್ಥೆಯನ್ನು ಸ್ವೀಕರಿಸಿ ಮನೆಯಲ್ಲಿಂದಲೇ ಎಲ್ಲಾ ಕೆಲಸವಾಗುವ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಎಲ್ಲಾ ಕೆಲಸವನ್ನು ಎಲ್ಲಿಂದ ಬೇಕಾದರೂ ಮಾಡಬಹುದೆಂಬುದನ್ನು ನಿಜ ಗೊಳಿಸಿದ ಈ ‘ ವರ್ಕ್ ಫ಼್ರಾಂ ಹೋಮ್’ ಸಿದ್ಧಾಂತ ಕಾರ್ಪೋರೆಟ್ ವಲಯದಲ್ಲಿ ಧನಾತ್ಮಕ ಬದಲಾವಣೆ ಹಾಗೂ ಬೆಳವಣಿಗಳೆರಡನ್ನೂ ಹೆಚ್ಚಿಸಿದೆ.
ಉದ್ಯೋಗಿಗಳಿಗೂ ನಗರಗಳಲ್ಲಿ ಕಚೇರಿ ಓಡಾಟಕ್ಕೆಂದೇ ಗಂಟೆಗಟ್ಟಲೇ ವ್ಯರ್ಥವಾಗುವುದನ್ನು ಈ ವರ್ಕ ಫ಼್ರಾಂ ಹೋಮ್ ವ್ಯವಸ್ಥೆ ನಿಲ್ಲಿಸಿ ಕೆಲಸಕ್ಕೆಂದೇ ಹೆಚ್ಚಿನ ಸಮಯವನ್ನು ಕೊಡಬಹುದೆಂಬ ಸಾಧ್ಯತೆಯನ್ನು ಹೆಚ್ಚಿಸಿದೆ. ಉದ್ಯೋಗಿಗಳ ವೈಯುಕ್ತಿಕ ಆರೋಗ್ಯ ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆಯಲ್ಲಿಯೂ ಹೆಚ್ಚಿನ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ವರ್ಕ್ ಫ಼್ರಾಂ ಹೋಮ್ ಸಿದ್ಧಾಂತದ ಕುರಿತಾಗಿ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲು ಗಳು ಹಾಗೂ ಸಾಧ್ಯತೆಗಳ ಕುರಿತಾಗಿ ಚರ್ಚಿಸಲು ವಿಚಾರ ಸಂಕೀರ್ಣವೊಂದನ್ನು ‘ಶಿರಸಿ ಟೆಕ್ ಫ಼ೋರಂ’ ವತಿಯಿಂದ ಏರ್ಪಡಿಸಲಾಗಿದೆ.
ಜುಲೈ 11ರಂದು ಶಿರಸಿಯ ಟಿಎಂಎಸ್ ಸಭಾಂಗಣದಲ್ಲಿ ವಿಚಾರ ಸಂಕೀರ್ಣ ನಡೆಯಲಿದ್ದು ಅಧ್ಯಕ್ಷತೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶರ ಹೆಗಡೆ ಕಾಗೇರಿ ವಹಿಸಲಿದ್ದಾರೆ.
ವರ್ಕ್ ಫ಼್ರಾಂಹೋಮ್ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ಎಲ್ಲ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ಸಂಯೋಜಕರು ತಿಳಿಸಿದ್ದಾರೆ.
ಸಂಪರ್ಕಕ್ಕಾಗಿ
ಸುಬ್ರಹ್ಮಣ್ಯ ಜಿ ಹೆಗಡೆ- 9448136855
ವಿನಾಯಕ ಜಿ ಹೆಗಡೆ – 8970601099
ಸುಬ್ರಾಯ ಹೆಗಡೆ – 9449359093
ವಿಘ್ನೇಶ್ವರ ಗಾಂವ್ಕರ್ – 9449188849
ರವಿ ಹೆಗಡೆ ಹೂವಿನಮನೆ – 9448076809