ಯಲ್ಲಾಪುರ: ಇಕೊ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಯಲ್ಲಿ ಬಿದ್ದ ಘಟನೆ ಪಟ್ಟಣದ ಕಲ್ಮಠದ ಬಳಿ ಆನಗೋಡ ರಸ್ತೆಯಲ್ಲಿ ನಡೆದಿದೆ.
ಬೆಲ್ಲ ತುಂಬಿಕೊಂಡು ಹೋಗುತ್ತಿದ್ದ ವಾಹನಕ್ಕೆ ಅಡ್ಡಲಾಗಿ ಎಮ್ಮೆಯೊಂದು ಬಂದಿದ್ದರಿಂದ ಅದನ್ನು ತಪ್ಪಿಸಲು ಹೋದಾಗ ಘಟನೆ ನಡೆದಿದೆ.
ಆನಗೋಡ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಮಣ್ಣನ್ನು ಹಾಕದೆ ಇರುವ ಕಾರಣ ಚಾಲಕ ವಾಹನವನ್ನು ರಸ್ತೆ ಪಕ್ಕಕ್ಕೆ ಇಳಿಸಿದಾಗ ನಿಯಂತ್ರಣ ತಪ್ಪಿ ಗದ್ದೆಗೆ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನದಲ್ಲಿದ್ದ ಬೆಲ್ಲದ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.