
ಜೋಯಿಡಾ: ಉಳವಿ -ಗೋವಾ ರಾಜ್ಯ ಹೆದ್ದಾರಿ-146, ರಲ್ಲಿ ,ಕಳಸಾಯಿ ಸಮೀಪ ಅತಿಯಾದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿದ್ದು ಕುಂಬಾರವಾಡ ಮುಖಾಂತರ ಉಳವಿ ಮಾರ್ಗ ಸಂಪೂರ್ಣ ಬಂದ್ ಆಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ.ದೇಶಪಾಂಡೆ ಪರಿವೀಕ್ಷಣೆ ನಡೆಸಿದರು.ಸಂಚಾರಕ್ಕೆ ವ್ಯತ್ಯಯವಾಗದಂತೆ ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ವಾರದೊಳಗಡೆ ಸಂಚಾರಕ್ಕೆ ಮುಕ್ತವಾಗುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ..