Slide
Slide
Slide
previous arrow
next arrow

ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

300x250 AD

ನವದೆಹಲಿ: ಕೇಂದ್ರ ಇಂಧನ ಸಚಿವಾಲಯವು  ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಮೂಲಸೌಕರ್ಯವನ್ನು ಸ್ಥಾಪಿಸಲು ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಪ್ರಕಟಿಸಿದೆ.

ಸುರಕ್ಷಿತ, ವಿಶ್ವಾಸಾರ್ಹ, ಎಲ್ಲರು ಪ್ರವೇಶಿಸಬಹುದಾದ ಮತ್ತು ಕೈಗೆಟುಕುವ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಖಾತ್ರಿಪಡಿಸುವ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಹೊಸ ಮಾರ್ಗಸೂಚಿಗಳ ಉದ್ದೇಶವಾಗಿದೆ ಎಂದು  ಸಚಿವಾಲಯದ ಪ್ರಕಟಣೆ  ತಿಳಿಸಿದೆ.

ಇದಲ್ಲದೆ, ಇದು ಸಂಪೂರ್ಣ ಇವಿ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಇಂಧನ ಸುರಕ್ಷತೆ ಒದಗಿಸುತ್ತದೆ ಮತ್ತು ದೇಶದ ಇಂಧನ ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಎಂದಿದೆ.

300x250 AD

ಈ ಮಾರ್ಗಸೂಚಿಗಳು ಸಮಗ್ರವಾಗಿವೆ ಮತ್ತು ಇವಿಗಳ ವೈಯಕ್ತಿಕ ಮಾಲೀಕರಿಗೆ ಮತ್ತು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಿಗೆ (PCS) ನಿಬಂಧನೆಗಳನ್ನು ಒಳಗೊಂಡಿದೆ

 ಅಸ್ತಿತ್ವದಲ್ಲಿರುವ ವಿದ್ಯುತ್ ಸಂಪರ್ಕಗಳನ್ನು ಬಳಸಿಕೊಂಡು  ನಿವಾಸ/ಕಚೇರಿಗಳಲ್ಲಿ ಇವಿ ಗಳನ್ನು ಚಾರ್ಜ್ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ.

Share This
300x250 AD
300x250 AD
300x250 AD
Back to top