ಸಿದ್ದಾಪುರ: ಯಕ್ಷಗಾನದ ಮೇರು ಭಾಗವತ, ಪೌರಾಣಿಕ ಆಖ್ಯಾನಗಳನ್ನು ಸಮರ್ಥವಾಗಿ ನಡೆಸುವ ಕೊಳಗಿ ಕೇಶವ ಹೆಗಡೆ ಅವರಿಗೆ ಹರಿಹರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಬಿಜ್ಜುವಳ್ಳಿಯಲ್ಲಿ ನಡೆದ ಸಂಕ್ರಾಂತಿ ಹಬ್ಬದ ನಿಮಿತ್ತ ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡದ ಯಕ್ಷಗಾನ ಪ್ರದರ್ಶನ ವೇಳೆ ಅಲ್ಲಿನ ಅಯ್ಯಪ್ಪ ಸ್ವಾಮಿ ಧಾರ್ಮಿಕ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಿ ಕಲಾ ಕ್ಷೇತ್ರದ ಕೊಡುಗೆ ಬಣ್ಣಿಸಿತು.
ಈ ಪ್ರಶಸ್ತಿ ಪ್ರದಾನ ಮಾಡಿದ ಬೆಜ್ಜುವಳ್ಳಿಯ ಡಾ. ವಿಶ್ವಭಾರತೀ ಸಂತೋಷ ಗುರೂಜಿ ಮಾತನಾಡಿದರು.
ಈ ವೇಳೆ ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಸಿದ್ದನಗೌಡ ಪಾಟೀಲ, ದತ್ತಮೂರ್ತಿ ಭಟ್ಟ, ಮುಂತಾದವರಿದ್ದರು.
ಬಳಿಕ ಯಕ್ಷ ಭಾವೈಕ ಪ್ರದರ್ಶನ ಯಾತ್ರೆ ಹಿನ್ನಲೆಯಲ್ಲಿ ಆಖ್ಯಾನ ಪ್ರದರ್ಶನ ಕಂಡಿತು.