ಯಲ್ಲಾಪುರ: ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಸದುದ್ದೇಶದಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ” ಜನ ಸೇವಕ ಡಿಜಿಟಲ್ “ಸಂಚಿಕೆಯನ್ನು ಸಿದ್ದಪಡಿಸಿದ್ದು,
ಇಂದು ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಮಂಡಲಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಎನ್.ಗಾಂವ್ಕರ್ ಹಾಗೂ ಉದ್ಯಮಿಗಳಾದ ಶ್ರೀ ಬಾಲಕೃಷ್ಣ ನಾಯಕ ಅವರು ಜೊತೆಗೂಡಿ ” ಜನ ಸೇವಕ ಡಿಜಿಟಲ್ ” ಮಾಸಿಕ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು, ಪಕ್ಷದ ಕಾರ್ಯಕರ್ತರು ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯವನ್ನು ಮತದಾರರಿಗೆ ತಲುಪಿಸುವ ದೃಷ್ಟಿಯಿಂದ ಈ ಡಿಜಿಟಲ್ ಸಂಚಿಕೆಯನ್ನು ಪ್ರಾರಂಭಿಸಿದ್ದು ಮುಂದಿನ ಹಂತದಲ್ಲಿ ಗ್ರಾಮ ಪಂಚಾಯತ ಮಟ್ಟದ ಅಭಿವೃದ್ಧಿ ಕಾಮಗಾರಿಯ ಮಾಹಿತಿಯನ್ನು ಈ ಡಿಜಿಟಲ್ ಸಂಚಿಕೆಯಲ್ಲಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಎನ್.ಗಾಂವ್ಕರ್, ಉಪಾಧ್ಯಕ್ಷರಾದ ಶ್ರೀ ಶಿರಿಷ್ ಪ್ರಭು, ಪ್ರಧಾನ ಕಾರ್ಯದರ್ಶಿ ಶ್ರೀ ರವಿ ಭಟ್ ಬರಗದ್ದೆ, ಪಟ್ಟಣ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಶ್ಯಾಮಲಿ ಪಾಟಣಕರ್, ಪ್ರಮುಖರಾದ ಶ್ರೀ ಬಾಲಕೃಷ್ಣ ನಾಯಕ, ಶ್ರೀ ಭಾಸ್ಕರ್ ನಾರ್ವೇಕರ್ ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.