ಯಲ್ಲಾಪುರ:ತಾಲೂಕಿನ ಕಣ್ಣಿಗೇರಿಯಲ್ಲಿ ಬೈಕ್ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೊಯಿಡಾ ತಾಲೂಕಿನ ಪ್ರಧಾನಿಯ ಹಸನ್ ಸಾಬ್ ರಾಜೇಸಾಬ್ ಅಮಿನಗಡ ಬಂಧಿತ ವ್ಯಕ್ತಿ. ಈತ ಕಳೆದ ಡಿಸೆಂಬರ್ 25 ರಂದು ಕಣ್ಣಿಗೇರಿಯ ಶಂಕರ ಗೊಂದಳಿ ಎಂಬವರ ಅಂಗಡಿ ಬಳಿ ಬಂದು, ತಾಟವಾಳಕ್ಕೆ ಹೋಗಿ ಬರುವುದಾಗಿ ಹೇಳಿ ಬೈಕ್ ಪಡೆದಿದ್ದ. ಆದರೆ ಮರಳಿ ಬಾರದೇ ಬೈಕ್ ಕದ್ದೊಯ್ದಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.
ಡಿ.ವೈ.ಎಸ್.ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪಿಐ ಸುರೇಶ ಯಳ್ಳೂರ, ಪಿ.ಎಸ್.ಐ ಗಳಾದ ಮಂಜುನಾಥ ಗೌಡರ್, ಪ್ರಿಯಾಂಕಾ ನ್ಯಾಮಗೌಡ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಮಾಣೇಶ್ವರ ನಾಯ್ಕ, ಗಜಾನನ ನಾಯ್ಕ, ಪರಶುರಾಮ ಕಾಳೆ, ಶೇಷು ಮರಾಠಿ, ವಿನಾಯಕ ರೆಡ್ಡಿ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.