• Slide
    Slide
    Slide
    previous arrow
    next arrow
  • ಸಿರಿ ಕಲಾ ಬಳಗದ ವತಿಯಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ

    300x250 AD

    ಯಲ್ಲಾಪುರ:ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಸರಳವಾಗಿ ನಡೆಯಿತು.
    ಶುಕ್ರವಾರ ರಾತ್ರಿ ಸಿರಿ ಕಲಾ ಬಳಗದ ಆಶ್ರಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವೈದಿಕ, ಅರ್ಥಧಾರಿ ವೇ.ಗಣಪತಿ ಭಟ್ಟ ಮಾಗೋಡ ಹಾಗೂ ಹವ್ಯಾಸಿ ಮದ್ದಲೆವಾದಕ ಸುಬ್ರಾಯ ಭಟ್ಟ ಗಾಣಗದ್ದೆ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು.

    ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ಸ್ಥಳೀಯವಾಗಿ ಹಲವು ದಶಕಗಳ ಕಾಲ ಕಲಾ ಸೇವೆ ಮಾಡಿದ ಹಿರಿಯರನ್ನು ಗುರುತಿಸಿ ಗೌರವಿಸುತ್ತಿರುವ ಕಲಾ ಬಳಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

    300x250 AD

    ಅರ್ಥಧಾರಿ ರಾಮಕೃಷ್ಣ ಭಟ್ಟ ಮಾಗೋಡ, ವಿದ್ವಾನ್ ಮಹೇಶ ಭಟ್ಟ ಇಡಗುಂದಿ ಉಪಸ್ಥಿತರಿದ್ದರು. ಸಿರಿ ಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ಟ ವೈದಿಕರಮನೆ, ನರಸಿಂಹ ಭಟ್ಟ ಕುಂಕಿಮನೆ, ಶ್ರೀಧರ ಅಣಲಗಾರ ನಿರ್ವಹಿಸಿದರು. ನಂತರ ಸ್ಥಳೀಯ ಕಲಾವಿದರಿಂದ ಸತ್ಯವಾನ್ ಸಾವಿತ್ರಿ ತಾಳಮದ್ದಲೆ ನಡೆಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top