
ಹೊನ್ನಾವರ :
ತಾಲೂಕಿನ ಟೊಂಕ ಕಾಸರಕೋಡು ನಿವಾಸಿಯಾದ ಉದಯ ದಾಮೋದರ ತಾಂಡೆಲ್ ಅವರು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮೊನ್ನೆ ನಡೆದಿದ್ದು, ಮೃತರ ಮನೆಗೆ ಶಾಸಕ ಸುನೀಲ್ ನಾಯ್ಕ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಕುಟುಂಬದ ತಾತ್ಕಾಲಿಕ ನಿರ್ವಹಣೆಗಾಗಿ 50 ಸಾವಿರ ರೂಪಾಯಿ ವೈಯಕ್ತಿಕ ಪರಿಹಾರವನ್ನು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ರೂಪಾಯಿ ಪರಿಹಾರವನ್ನು ಶಾಸಕರು ಮಂಜೂರು ಮಾಡಿಸಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಿದರು.