ಅಂಕೋಲಾ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿದ್ದು, ಶನಿವಾರ ಕೊರೊನಾ ಪಾಸಿಟಿವ್ ಸಂಖ್ಯೆ ಬಂದೇ ಸಮನೆ ಏರಿಕೆಯಾಗಿ ಮುನ್ನೂರರ ಗಡಿ ದಾಟಿದೆ. ಇಂದು ಒಟ್ಟೂ 396 ಕೇಸ್ ವರದಿಯಾಗಿದ್ದು, 67 ಮಂದಿ ಗುಣಮುಖರಾಗಿದ್ದಾರೆ.
ಇಂದು ಕಾರವಾರದಲ್ಲಿ ಅತೀ ಹೆಚ್ಚು 135 ಕೇಸ್, ಅಂಕೋಲಾ 31, ಕುಮಟಾ 32, ಹೊನ್ನಾವರ 59, ಭಟ್ಕಳ 28, ಶಿರಸಿ 31, ಯಲ್ಲಾಪುರ 22, ಮುಂಡಗೋಡ 9, ಹಳಿಯಾಳದಲ್ಲಿ 37, ಜೋಯಿಡಾದಲ್ಲಿ 2 ಕೇಸ್ ದೃಢಪಟ್ಟಿದೆ.
ಈವರೆಗೆ ಜಿಲ್ಲೆಯಲ್ಲಿ 793 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ಸದ್ಯ 1425 ಕೇಸ್ ಸಕ್ರಿಯವಾಗಿದೆ. ಇಂದು 67 ಮಂದಿ ಗುಣಮುಖರಾಗಿದ್ದಾರೆ.