Slide
Slide
Slide
previous arrow
next arrow

ಕಾನಸೂರು ಪ್ರೌಢಶಾಲೆಗೆ ಟೀಂ ಪರಿವರ್ತನೆ ವತಿಯಿಂದ ಸ್ಮಾರ್ಟ್ ಟಿವಿ ವಿತರಣೆ.

300x250 AD

ಶಿರಸಿ: ಟೀಂ ಪರಿವರ್ತನೆ ಸಂಸ್ಥೆಯ ವತಿಯಿಂದ ಕಾನಸೂರು ಪ್ರೌಢಶಾಲೆಗೆ ಸ್ಮಾರ್ಟ್ ಟಿವಿ ವಿತರಣೆ ಮಾಡಲಾಯಿತು.

ಸ್ಮಾರ್ಟ್ ಟಿವಿ ವಿತರಿಸಿ ಮಾತನಾಡಿದ ಟೀಂ ಪರಿವರ್ತನೆ ಸಂಸ್ಥಾಪಕ ಹಿತೇಂದ್ರ ನಾಯ್ಕ ವಿದ್ಯೆ ಎನ್ನುವುದು ಆತ್ಮದ ಗುಣವಾಗಿದೆ. ಜ್ಞಾನಕ್ಕಾಗಿ ವಿದ್ಯೆ ಕಲಿಯಬೇಕೇ ಹೊರತು ಅಹಂಕಾರಕ್ಕಾಗಿ ಅಲ್ಲ. ಇಂದು ಇಡೀ ಜಗತ್ತನ್ನು ಆಳುತ್ತೀರುವುದು ಬುದ್ದಿವಂತಿಕೆಯಿಂದಲೇ ಆದ್ದರಿಂದ ಯಾರು ಬುದ್ದಿವಂತರಿರುತ್ತಾರೋ ಅವರು ಇಡೀ ಜಗತ್ತನ್ನೇ ಗೆಲ್ಲಬಹುದು ಎಂದರು.

ನಮ್ಮ ಯೋಚನೆಗಳು ಬದ್ದವಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ. ನಾವು ಬದಲಾಗದೇ ಸಮಾಜ ಬದಲಾಗುವುದಿಲ್ಲ. ಇಚ್ಚಾಶಕ್ತಿ ಯ ಕೊರತೆಯಿಂದ ಇನ್ನೂ ಸಾಕಷ್ಟು ಸಮಸ್ಯೆ ಗಳಿಗೆ ಪರಿಹಾರ ಸಿಗುತ್ತಿಲ್ಲ.ಇಂದಿನ ಯುವ ಸಮಾಜ ಮನಸ್ಸು ಮಾಡಿದರೆ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೀಗಲಿದೆ. ನಮ್ಮ ಜೀವನದ ಬಗ್ಗೆ ನಾವೇ ಚಿಂತಿಸಬೇಕು.ಒಮ್ಮೆ ಎಡವಿ ಬಿದ್ದೆವೆ ಎಂದು ಧೃತಿಗೆಡದೆ ಸತತ ಪ್ರಯತ್ನ ಮಾಡಬೇಕು. ಗುರು ಹಿರಿಯರ ಯನ್ನು ತಂದೆತಾಯಿ ಗಳನ್ನು ಗೌರವಿಸದೇ ಇರುವವರು ಎಷ್ಟೇ ಕಲಿತರೂ ಪ್ರಯೋಜನ ಇಲ್ಲ ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ .ಆರ್ ಹೆಗಡೆ ಹಿತೇಂದ್ರ ನಾಯ್ಕ ಸಂಸ್ಥಾಪಕ ಟೀಂ ಪರಿವರ್ತನೆ ಆರಂಭವಾಗಿ ,ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯಬಾರದು . ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವಿದ್ಯಾರ್ಥಿಗಳಾಗಬೇಕು. ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ವೀರ ಸನ್ಯಾಸಿ . ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಗಳನ್ನು ಪಾಲಿಸಬೇಕು ಎಂದರು.

300x250 AD

ಶಾಲಾ ಮುಖ್ಯ ಶಿಕ್ಷಕಿ ಮೀನಾ ಬೋರಕರ್ ಮಾತನಾಡಿ ನಮ್ಮ ಶಾಲೆಗೆ ಟೀಂ ಪರಿವರ್ತನೆ ಯವರು ಸ್ಮಾರ್ಟ್ ಟಿವಿ ಯನ್ನು ವಿತರಿಸಿದ್ದಾರೆ. ಕೊರೋನಾ ಸಮಯದಲ್ಲಾದ ಶಿಕ್ಷಣ ವ್ಯವಸ್ಥೆ ಯಿಂದ ಆನ್ಲೈನ್ ತರಗತಿಗಳನ್ನು ನಡೆಸಲು ಟಿವಿ ಅವಶ್ಯಕತೆ ಇತ್ತು. ಆ ಕೊರತೆಯನ್ನು ಟೀಂ ಪರಿವರ್ತನೆ ನೀಗಿಸಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೀರುವ ಟೀಂ ಪರಿವರ್ತನೆ ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮತ್ತಷ್ಟು ಯಶಸ್ಸುಗಳು ಲಭ್ಯವಾಗಲಿ ಎಂದರು.

ಈ ಸಂದರ್ಭದಲ್ಲಿ ವಿಶ್ವನಾಥ ನಾಯ್ಕ, ಹರೀಶ್ ದೇವಾಡಿಗ , ಮಂಜುಳಾ ನಾಯ್ಕ , ವೀಣಾ ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top