ಕಾರವಾರ: ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ‘ನಮ್ಮ ಕಾರವಾರ’ ವತಿಯಿಂದ ಎನ್‌ಕೆವೈ ಕ್ಲಬ್ ಸಂಯುಕ್ತಾಶ್ರಯದಲ್ಲಿ ಬಾಡದ ಪ್ರೀಮಿಯರ್ ಬಾಲಭವನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಈ ಕಾರ್ಯಕ್ರಮವನ್ನು ನಮಸ್ತೆ, ಝೀ ಕಲೆಕ್ಷನ್ಸ್, ಶೇಷರಾಜ್ ಮಾಲ್ ಪ್ರಾಯೋಜಿಸಿ ಪ್ರೋತ್ಸಾಹಿಸಿತ್ತು. ಸ್ಪರ್ಧೆಯಲ್ಲಿ ಸುಮಾರು 75ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಓಂಕಾರ್ ನಾಯಕ್ ಮತ್ತು ಅಥರ್ವ ಚಿಪ್ಕರ್ ‘ಶಾಲಾ ಮಟ್ಟದ ಅತ್ಯುತ್ತಮ ಯುವ ಮನಸ್ಸುಗಳು’, 8ನೇ ತರಗತಿಯ ಅಮೋಘ್ ‘ಶಾಲಾ ಮಟ್ಟದ ಅತ್ಯುತ್ತಮ ಯುವ ಪ್ರಬಂಧಕಾರ’, ಸಾಕ್ಷಿತಾ ‘ಶಾಲಾ ಮಟ್ಟದ ಅತ್ಯುತ್ತಮ ಯುವ ಕಲಾವಿದ’ ಪ್ರಶಸ್ತಿಗೆ ಭಾಜನರಾದರು. 9ನೇ ತರಗತಿಯ ಪ್ರಿಯಾ ಪರುಳೇಕರ್ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸ್ಮಿತಾ ಪೂಜಾರಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು.
ಪ್ರೀಮಿಯರ್ ಶಾಲೆಯ ಮುಖ್ಯ ಶಿಕ್ಷಕ ಪ್ರತಾಬ್, ಚಿತ್ರಕಲಾ ಶಿಕ್ಷಕ ಗಣೇಶ್, ‘ನಮ್ಮ ಕಾರವಾರ’ದ ಸ್ವರೂಪ್ ತಳೇಕರ್, ಸ್ವಯಂಸೇವಕರಾದ ಶ್ವೇತಾ ರಾಯ್ಕರ್, ಶ್ರೇಯಾ ಫೆರ್ನಾಂಡಿಸ್, ಚೇತನಾ ಕೊಲ್ವೇಕರ್, ಸಾಹಿಲ್ ತಳೇಕರ್, ಅನ್ವರ್ ಮುನ್ಷಿ ಮತ್ತು ಆದಿತ್ಯ ನಾಗೇಕರ್ ಈ ವೇಳೆ ಇದ್ದರು.