ಶಿರಸಿ: ದಿನದಿಂದ ದಿನಕ್ಕೆ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು,ಇದೀಗ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ 6 ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದ್ದು,ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಚಿತ್ರದುರ್ಗ,ಕಡೂರಿನಲ್ಲಿ ವಿಶೇಷ ಟ್ರೈನಿಂಗ್ ಮುಗಿಸಿ ಬಂದ ಈರ್ವರು ಸಿಬ್ಬಂದಿಗಳಿಗೆ ಹಾಗೂ ಉಳಿದ ನಾಲ್ಕು ಸಿಬ್ಬಂದಿಗಳಿಗೆ ಕೊರೋನಾ ಪತ್ತೆಯಾಗಿದೆ.ಠಾಣೆಗೆ ಬಂದ ಸಾರ್ವಜನಿಕರಿಗೆ ಹೊರಗೆ ವಿಚಾರಣೆ ನಡೆಸಿ ಕಳುಹಿಸಲಾಗುತ್ತಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಳಿದ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.