ಅಂಕೋಲಾ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಿದ್ದು, ಶುಕ್ರವಾರ ಕೊರೊನಾ ಪಾಸಿಟಿವ್ ಸಂಖ್ಯೆ ಬಂದೇ ಸಮನೆ ಏರಿಕೆಯಾಗಿದ್ದು, 278 ಕೇಸ್ ವರದಿಯಾಗಿದೆ. 30 ಮಂದಿ ಗುಣಮುಖರಾಗಿದ್ದಾರೆ.
ಇಂದು ಕಾರವಾರದಲ್ಲಿ ಅತೀ ಹೆಚ್ಚು 85 ಕೇಸ್, ಅಂಕೋಲಾ 41, ಕುಮಟಾ 27, ಹೊನ್ನಾವರ 50, ಭಟ್ಕಳ 11, ಶಿರಸಿ 19, ಸಿದ್ದಾಪುರ 15, ಯಲ್ಲಾಪುರ 10, ಮುಂಡಗೋಡ 16, ಹಳಿಯಾಳದಲ್ಲಿ 0, ಜೋಯಿಡಾದಲ್ಲಿ 4 ಕೇಸ್ ದೃಢಪಟ್ಟಿದೆ.
ಈವರೆಗೆ ಜಿಲ್ಲೆಯಲ್ಲಿ 793 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ಸದ್ಯ 1096 ಕೇಸ್ ಸಕ್ರಿಯವಾಗಿದೆ. ಇಂದು 30 ಮಂದಿ ಗುಣಮುಖರಾಗಿದ್ದು ಕಾರವಾರ 7, ಅಂಕೋಲಾ 1, ಕುಮಟಾ 12, ಭಟ್ಕಳ 5, ಶಿರಸಿ 3, ಸಿದ್ದಾಪುರ, ಮುಂಡಗೋಡದಲ್ಲಿ ಒಬ್ಬೊಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.