Slide
Slide
Slide
previous arrow
next arrow

ದೇಶದ ಒಟ್ಟು ಅರಣ್ಯ- ಮರಗಳ ವ್ಯಾಪ್ತಿ ಶೇ.80.9 ದಶಲಕ್ಷ ಹೆಕ್ಟೇರ್ ಹೆಚ್ಚಳ

300x250 AD

ನವದೆಹಲಿ: ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು ಶೇ.80.9 ದಶಲಕ್ಷ ಹೆಕ್ಟೇರ್ ಆಗಿದೆ, ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 24.62 ರಷ್ಟಿದೆ. 2019ರ ನಿರ್ಧರಣೆಗೆ ಹೋಲಿಸಿದರೆ, ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ದೇಶದ ಅರಣ್ಯ ಮತ್ತು ವೃಕ್ಷ ವ್ಯಾಪ್ತಿಯ ನಿರ್ಧರಣೆ ಮಾಡಲು ಆದೇಶಿತವಾದ ಭಾರತೀಯ ಅರಣ್ಯ ಸಮೀಕ್ಷೆ (ಎಫ್.ಎಸ್.ಐ.) ಸಿದ್ಧಪಡಿಸಿರುವ `ಭಾರತದ ಅರಣ್ಯ ವರದಿ 2021’ಯನ್ನು ಬಿಡುಗಡೆ ಮಾಡಿ ವರದಿಯನ್ನು ಹಂಚಿಕೊಂಡರು.

ಪ್ರಸ್ತುತ ನಿರ್ಧರಣೆಯು 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಶೇ.33 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವು ಅರಣ್ಯವನ್ನು ಹೊಂದಿವೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ, ಪರಿಮಾಣಾತ್ಮಕವಾಗಿ ಅರಣ್ಯಗಳನ್ನು ಸಂರಕ್ಷಣೆಗಷ್ಟೇ ಸೀಮಿತವಾಗಿಲ್ಲ ಜೊತೆಗೆ ಅದನ್ನು ಗುಣಾತ್ಮಕವಾಗಿ ಉತ್ಕೃಷ್ಟಗೊಳಿಸಲೂ ಶ್ರಮಿಸುತ್ತಿದೆ ಎಂದರು.

ಐ.ಎಸ್.ಎಫ್.ಆರ್-2021 ಅರಣ್ಯ ಪ್ರದೇಶ, ವೃಕ್ಷಗಳ ವ್ಯಾಪ್ತಿ, ಮ್ಯಾಂಗ್ರೋವ್ ವ್ಯಾಪ್ತಿ, ಗ್ರೋಯಿಂಗ್ ಸ್ಟಾಕ್, ಭಾರತದ ಅರಣ್ಯಗಳಲ್ಲಿ ಶೇಖರಣೆಯಾಗುವ ಇಂಗಾಲ, ಕಾಳ್ಗಿಚ್ಚು ನಿಗಾ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಅರಣ್ಯ ಪ್ರದೇಶ, ಎಸ್.ಎ.ಆರ್. ದತ್ತಾಂಶ ಮತ್ತು ಭಾರತದಲ್ಲಿ ಹವಾಮಾನ ಬದಲಾವಣೆಯ ಹಾಟ್ ಸ್ಪಾಟ್ ಗಳನ್ನು ಬಳಸಿಕೊಂಡು ಜೀವರಾಶಿಯ ನೆಲದ ಅಂದಾಜುಗಳ ಮೇಲೆ ಮಾಹಿತಿಯನ್ನು ಒದಗಿಸುತ್ತದೆ.

ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್ ಆಗಿದೆ, ಇದು ದೇಶದ ಭೌಗೋಳಿಕ ಪ್ರದೇಶದ ಶೇ. 24.62ರಷ್ಟಾಗಿದೆ. 2019ರ ನಿರ್ಧರಣೆಗೆ ಹೋಲಿಸಿದರೆ, ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ. ಈ ಪೈಕಿ 1,540 ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, ವೃಕ್ಷಗಳ ವ್ಯಾಪ್ತಿಯು 721 ಚ.ಕಿ.ಮೀ. ಹೆಚ್ಚಾಗಿದೆ.
ದಟ್ಟವಾದ ಅರಣ್ಯದ ನಂತರ ಮುಕ್ತ ಅರಣ್ಯದಲ್ಲಿ ಕಾಡಿನ ವ್ಯಾಪ್ತಿಯ ಹೆಚ್ಚಳವನ್ನು ಗಮನಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಹೆಚ್ಚಳವನ್ನು ಕಂಡಿರುವ ಮೊದಲ ಮೂರು ರಾಜ್ಯಗಳು ಆಂಧ್ರ ಪ್ರದೇಶ (647 ಚದರ ಕಿಮೀ) ನಂತರ ತೆಲಂಗಾಣ (632 ಚದರ ಕಿಮೀ) ಮತ್ತು ಒಡಿಶಾ (537 ಚದರ ಕಿಮೀ) ಆಗಿವೆ.

300x250 AD

ಪ್ರದೇಶವಾರು ರೀತ್ಯ ಮಧ್ಯಪ್ರದೇಶವು ಅತಿ ಹೆಚ್ಚು ಅರಣ್ಯವನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ, ಛತ್ತೀಸಗಢ, ಒಡಿಶಾ ಮತ್ತು ಮಹಾರಾಷ್ಟ್ರ ಇವೆ. ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾವಾರು ಅರಣ್ಯ ಪ್ರದೇಶದ ಪ್ರಕಾರ, ಅಗ್ರ ಐದು ರಾಜ್ಯಗಳು ಮಿಜೋರಾಂ (ಶೇ.84.53), ಅರುಣಾಚಲ ಪ್ರದೇಶ (ಶೇ.79.33), ಮೇಘಾಲಯ (ಶೇ.76.00), ಮಣಿಪುರ (ಶೇ.74.34) ಮತ್ತು ನಾಗಾಲ್ಯಾಂಡ್ (ಶೇ.73.90) ಆಗಿದೆ.

17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅರಣ್ಯ ವ್ಯಾಪ್ತಿಯಲ್ಲಿರುವ ಭೌಗೋಳಿಕ ಪ್ರದೇಶದ ಶೇಕಡಾ 33ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಲಕ್ಷದ್ವೀಪ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ ಮತ್ತು ಮೇಘಾಲಯದ ಐದು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಶೇಕಡಾ 75ಕ್ಕಿಂತ ಹೆಚ್ಚು ಅರಣ್ಯವನ್ನು ಹೊಂದಿದ್ದರೆ, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ ಮಣಿಪುರ, ನಾಗಾಲ್ಯಾಂಡ್, ತ್ರಿಪುರಾ, ಗೋವಾ, ಕೇರಳ, ಸಿಕ್ಕಿಂ, ಉತ್ತರಾಖಂಡ, ಛತ್ತೀಸಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ಡಿಯು, ಅಸ್ಸಾಂ, ಒಡಿಶಾ, ಶೇಕಡಾ 33 ರಿಂದ 75 ರಷ್ಟು ಅರಣ್ಯವನ್ನು ಹೊಂದಿವೆ.

ದೇಶದ ಒಟ್ಟು ಮ್ಯಾಂಗ್ರೋವ್ ವ್ಯಾಪ್ತಿ 4,992 ಚದರ ಕಿ.ಮೀ. 2019ರ ಹಿಂದಿನ ನಿರ್ಧರಣೆಗೆ ಹೋಲಿಸಿದರೆ ಮ್ಯಾಂಗ್ರೋವ್ ವ್ಯಾಪ್ತಿಯಲ್ಲಿ 17 ಚದರ ಕಿಮೀ ಹೆಚ್ಚಳವನ್ನು ಗುರುತಿಸಲಾಗಿದೆ. ಮ್ಯಾಂಗ್ರೋವ್ ವ್ಯಾಪ್ತಿಯ ಹೆಚ್ಚಳವನ್ನು ತೋರಿಸುವ ಪ್ರಮುಖ ಮೂರು ರಾಜ್ಯಗಳು ಒಡಿಶಾ (8 ಚದರ ಕಿಮೀ), ಮಹಾರಾಷ್ಟ್ರ (4 ಚದರ ಕಿಮೀ) ಮತ್ತು ಕರ್ನಾಟಕ (3 ಚದರ ಕಿಮೀ) ಆಗಿದೆ.

ದೇಶದ ಕಾಡಿನಲ್ಲಿ ಒಟ್ಟು ಇಂಗಾಲದ ದಾಸ್ತಾನು 7,204 ದಶಲಕ್ಷ ಟನ್ ಗಳು ಎಂದು ಅಂದಾಜಿಸಲಾಗಿದೆ ಮತ್ತು 2019ರ ಕೊನೆಯ ನಿರ್ಧರಣೆಗೆ ಹೋಲಿಸಿದರೆ ದೇಶದ ಇಂಗಾಲದ ಸಂಗ್ರಹದಲ್ಲಿ 79.4 ದಶಲಕ್ಷ ಟನ್ ಗಳ ಹೆಚ್ಚಳವಾಗಿದೆ. ಇಂಗಾಲದ ದಾಸ್ತಾನು ವಾರ್ಷಿಕ ಹೆಚ್ಚಳ 39.7 ದಶಲಕ್ಷ ಟನ್­ಗಳಾಗಿವೆ ಎಂದರು.

Share This
300x250 AD
300x250 AD
300x250 AD
Back to top