ಶಿರಸಿ: ನಗರದ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.17 ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಶಾಖೆಯ ಶಿರಸಿ-1 ಹಾಗೂ ನಿಲೇಕಣಿ ಮಾರ್ಗಗಳ ಪ್ರದೇಶಗಳಾದ ಸಿ.ಪಿ. ಬಝಾರ, ರಾಜೀವನಗರ, ಐದು ರಸ್ತೆ, ನಟರಾಜ ರಸ್ತೆ, ಮುಸ್ಲೀಂಗಲ್ಲಿ ಮಾರ್ಕೆಟ್ ಪ್ರದೇಶ, ವೀರಭದ್ರಗಲ್ಲಿ, ಕುಮಟಾ ರಸ್ತೆ, ನಿಲೇಕಣಿ , ವಿಜಯನಗರ ರಾಘವೇಂದ್ರ ಸರ್ಕಲ್ ಝೂ ಸರ್ಕಲ್, ಪಡ್ತಿಗಲ್ಲಿ ಹಾಗೂ ಗಾಂಧಿನಗರ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.