ಶಿರಸಿಃ ಇಲ್ಲಿಯ ಕೆ.ಡಿ.ಸಿ.ಸಿ. ಬ್ಯಾಂಕಿನ 16 ವರ್ಷ ಅಧ್ಯಕ್ಷರಾಗಿ ಹಾಗೂ ಜಿಲ್ಲೆಯ ವಿದಾನ ಪರಿಷತ್ತಿಗೆ ಸದಸ್ಯರಾಗಿ 12 ವರ್ಷಗಳ ಕಾಲ ಶ್ರೀಕಾಂತ ಘೋಟ್ನಕರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲೆಯಿಂದ ವಯಕ್ತಿಕ ಹಾಗೂ ಸಾರ್ವಜನಿಕ ಕೆಲಸಗಳ ಬಗ್ಗೆ ಅವರನ್ನು ಸಂಪರ್ಕಿಸಿದರೆ ಕೂಡಲೇ ಸ್ಪಂದಿಸಿ ಸಮಸ್ಯೆ ಪರಿಹಾರ ಮಾಡಿಸುತ್ತಿದ್ದರು. ಜಿಲ್ಲೆಯ ಮರಾಠಾ ಸಮುದಾಯದವರು ನಡೆಸುತ್ತಿರುವ ಸಾರ್ವತ್ರಿಕ ಕಾರ್ಯಕ್ರಮಗಳಿಗೆ ತಮ್ಮ ವಯಕ್ತಿಕವಾಗಿ ಅನೇಕ ರೀತಿಯಿಂದ ಧನ ಸಹಾಯವನ್ನು ಮಾಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಕೆಲಸ ಮಾಡಿದ್ದಾರೆ. ಯಾರೇ ಏನೇ ಮರಾಠಾ ಸಮುದಾಯದವರು ಆರೋಪಗಳನ್ನು ಮಾಡಿದರೂ ಜಿಲ್ಲೆಯ ಶೇಕಡಾ 90% ಮರಾಠಾ ಸಮುದಾಯದವರ ಬೆಂಬಲ ಶ್ರೀಕಾಂತ ಘೋಟ್ನಕರ ರವರಿಗೆ ಇದೆ ಎಂದು ಜಿಲ್ಲೆಯ ಮರಾಠಾ ಸಮದಾಯದ ಮುಖಂಡ ಪಾಂಡುರಂಗ ಪಾಟೀಲ ತಿಳಿಸಿದ್ದಾರೆ.